Friday, September 12, 2025
27.7 C
Bengaluru
Google search engine
LIVE
ಮನೆರಾಜಕೀಯಯರೇಹಳ್ಳಿ ಗ್ರಾಮದಲ್ಲಿ ಮರು ಮತದಾನಕ್ಕೆ ಒತ್ತಾಯ

ಯರೇಹಳ್ಳಿ ಗ್ರಾಮದಲ್ಲಿ ಮರು ಮತದಾನಕ್ಕೆ ಒತ್ತಾಯ

ಚಿತ್ತದುರ್ಗ: ಗ್ರಾಮದಲ್ಲಿ‌ ಮೂಲ ಸೌಕರ್ಯ ಒದಗಿಸದ ಕಾರಣ 2024ರ ಲೋಕಸಭಾ ಚುನಾವಣೆಯನ್ನು ಭಹಿಷ್ಕರಿಸಿದ ಹಿನ್ನೆಲೆ ಚಿತ್ರದುರ್ಗ ತಾಲೂಕಿನ ಯರೇಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿ ಮರು ಮತದಾನ ನಡೆಸಬೇಕು ಅಂತಾ ಕರುನಾಡ ವಿಜಯಸೇನೆ ಆಗ್ರಹಿಸಿದೆ.

ಚಿತ್ತದುರ್ಗ ತಾಲೋಕಿನ ಯರೇಹಳ್ಳಿಯಲ್ಲಿ ಕಳೆದ ಸುಮಾರು ವರ್ಷಗಳಿಂದ ಜನರಿಗೆ ಮೂಲಸೌಕರ್ಯ ಇಲ್ಲ. ಗ್ರಾಮದಲ್ಲಿ ದಿನಕ್ಕೆ‌ 3ಗಂಟೆಗಳ ಕಾಲ ಮಾತ್ರ ಕರೆಂಟ್ ಇರುತ್ತೆ. ಮೊಬೈಲ್ ಸಿಗ್ನಲ್‌ ಸಿಗದೇ ಗ್ರಾಮ ನಾಗರಿಕ ಪ್ರಪಂಚದಿಂದ ದೂರ ಉಳಿದಿದೆ.

 

ಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ತೊಂದರೆಯಾಗುತ್ತಿದೆ ಅಂತಾ ಗ್ರಾಮಸ್ಥರು ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದ್ರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುಮಾವಣೆ ಬಹಿಷ್ಕಾರ ಮಾಡಿದರು.

ಈ ಹಿನ್ನೆಲೆ‌ ಗ್ರಾಮದಲ್ಲಿ ಕೇವಲ 24 ಮತಗಳು ಮಾತ್ರ ಚಲಾವಣೆಯಾಗಿದ್ದವು. ಹಾಗಾಗಿ ಯರೇಹಳ್ಳಿಯಲ್ಲಿ ಜನರಿಗೆ ಮೂಲಸೌಕರ್ಯ ಕಲ್ಪಿಸಿ, ಮರುಮತದಾನ ನಡೆಸಿ ಅಂತಾ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಿಯವರಿಗೆ ಮನವಿ ಸಲ್ಲಿಸಿದರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments