ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದು ಹಾಗೂ ನಾಳೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಡಿಸಿ ಬಿ. ಸುಶೀಲಾ ಹೇಳಿದರು.

ಯಾದಗಿರಿ ನಗರದ ಮುಸ್ಲಿಂಪುರದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲ ಚೇತನರು ಮನೆಯಿಂದ ತಮ್ಮ ಮತ ಚಲಾಯಿಸಿದರು. ಹಿರಿಯ ನಾಗರಿಕರು ಅರ್ಜಿ ಸಲ್ಲಿಸಿರುವ ಮನೆಗೆ ಚುನಾವಣೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಮತದಾನ ಮಾಡಿಸಿಕೊಂಡರು.
ಮನೆಯಿಂದಲೇ ಮತದಾನ ಮಾಡುವ ಹಿರಿಯ ನಾಗರಿಕರು, ವಿಕಲಚೇತನರ ಮನೆಗಳಿಗೆ ಭೇಟಿ ನೀಡಿದ ಡಿಸಿ ಸುಶೀಲಾ ಪರಿಶೀಲನೆ ಮಾಡಿದರು


