ಬೆಂಗಳೂರು: 64 ಕೋಟಿ 87 ಲಕ್ಷ ಇಲ್ಲಿಯವರೆಗೆ ಸೀಜ್ ಮಾಡಿದ್ದೇವೆ ಕಾಟನ್ ಪೇಟೆಯಲ್ಲಿ ಸೀಜ್ ಮಾಡಿದ ಹಣ ಐಟಿ ಬಳಿ ಇದೆ. ಐಟಿ ಅವರು ಪರಿಶೀಲನೆ ಮಾಡುತ್ತರೆ. ಐಟಿ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಮಂಗಳವಾರ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಚುನಾವಣಾ ಸಂಬಂಧ ಬಿಬಿಎಂಪಿ ಕಮಿಷನರ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಮತದಾನ ಹೆಚ್ಚಳ ಮಾಡಬೇಕು. ಕಳೆದ ಬಾರಿ ಶೇ, 55 ರಷ್ಟು ಮತದಾನ ಆಗಿತ್ತು, ಈ ಬಾರಿ ಎಲ್ಲಾರು ಮತದಾನ ಮಾಡಿ ಎಂದು ತುಷಾರ್ ಗಿರಿನಾಥ್ ಮನವಿ ಮಾಡಿದರು.
ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆ ಇರುತ್ತೆ. 2464 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ, 1737 ಸೂಕ್ಷ್ಮ ಮತಗಟ್ಟೆ ಸ್ಥಾಪನೆ, ಸಾಮಾನ್ಯ ಮತಗಟ್ಟೆ 1352 ,ಸೆಕ್ಟರ್ ಮೊಬೈಲ್ 416 ಇದೆ. ಸೂಪರವೈಸರಿ ಮೊಬೈಲ್118. ಇದೆ ಸಬ್ ಡಿವಿಷನ್ ಮೊಬೈಲ್ 52 ಇದೆ.ಈಗಾಗಲೇ ಎಲ್ಲಾರಿಗೂ ತರಬೇತಿ ನೀಡಿದ್ದೇವೆ ಎಂದರು.

ಒಟ್ಟು 10.127.869_ಮತದಾರರು ಇದ್ದಾರೆ. ಯುವ ಮತದಾರರು 1602332 ಇದ್ದರೆ, ಒಟ್ಟು ಚೆಕ್ ಪೋಸ್ಟ್ ಗಳು 102 ಮಸ್ಟರಿಂಗ್ ಕೇಂದ್ರಗಳು 28 ಸ್ಥಾಪನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8984 ಮತಗಟ್ಟೆಗಳಿವೆ, 2004 ಕ್ರಿಟಿಕಲ್ ಮತಗಟ್ಟೆಗಳು ಇವೆ..253 ವಲ್ನರಬಲ್ ಮತಗಟ್ಟೆಗಳಿವೆ,43123 ಮತಗಟ್ಟೆ ಅಧಿಕಾರಿಗಳು ಇದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು .
ನಂತರ ಇದೇ ವೇಳೆ ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ,ಬೆಂಗಳೂರಿಗೆ ಐದು ಲೋಕಸಭೆ ಕ್ಷೇತ್ರಗಳು ಬರುತ್ತವೆ, ಇಲ್ಲಿ ಸರಿಯಾದ ರೀತಿ ಚುನಾವಣೆ ನಡೆಯಲು ಬೆಂಗಳೂರು ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ ಇದಕ್ಕಾಗಿ ಬೆಂಗಳೂರಿನ ಎಲ್ಲ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗುವುದು.ಇದಲ್ಲದೆ ಹೋಮ್ ಗಾರ್ಡ್, ಸಿಎಪಿಎಫ್, ಹಾಗೂ ಸಿಎಆರ್ ಕೆಎಸ್ ಆರ್ ಪಿ ತುಕಡಿ ಎಲ್ಲವನ್ನೂ ಬಳಸಿಕೊಳ್ಳಲಾಗುತ್ತೆ ಮತ್ತು ಸೆಕ್ಷನ್ 144 ಹಾಗೂ ಮದ್ಯ ಮಾರಾಟ ನಿಷೇಧ ಇರುತ್ತೆ ಎಂದರು.


