ತುಮಕೂರು : ಕರ್ತವ್ಯ ಲೋಪ ಹಿನ್ನಲೆ ಮೂವರು ಪಿಎಸ್ಐ ಸೇರಿ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ತುಮಕೂರು ಎಸ್ಪಿ ಕೆ.ವಿ.ಅಶೋಕ್ ಆದೇಶ ಹೊರಡಿಸಿದ್ದು, ತುರುವೇಕೆರೆ ಠಾಣಾ ಪಿಎಸ್ಐಗಳಾದ ಗಣೇಶ್ ಹಾಗೂ ರಾಮಚಂದ್ರ, ಹೆಡ್ ಕಾನ್ ಸ್ಟೇಬಲ್ ರಘುನಂದನ್ ಅಮಾನತು ಮಾಡಲಾಗಿದೆ.

ಮಹಿಳೆಯೊಬ್ಬರು ನಾಪತ್ತೆ ಆದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದರು. ಇನ್ನೊಂದು ಪ್ರಕರಣದಲ್ಲಿ ಬಡವನಹಳ್ಳಿ ಠಾಣಾ ಪಿಎಸ್ ಐ ನಾಗರಾಜು, ಎಎಸ್ ಐ ಸುರೇಶ್ ಅಮಾನತು ಮಾಡಿದ್ದು, ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದ ಆರೋಪದ ದೂರು ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿ ಅಶೋಕ ಅಮಾನತುಗೊಳಿಸಿದರು.