ಬೆಂಗಳೂರು : ಹನುಮಾನ್ ಹೀರೋ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಪ್ಯಾನ್ ಇಂಡಿಯಾ ‘ಮಿರಾಯ್ ‘ನಲ್ಲಿ ತೇಜ್ ಸಜ್ಜಾ ಸೂಪರ್​ ಯೋಧನಾಗಿ ಕಂಡುಬಂದಿದ್ದಾರೆ.

ಹನುಮಾನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಾರ್ತಿಕೇಯ, ಕಾರ್ತಿಕೇಯ-2 , ಧಮಾಕ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಘಟ್ಟಮನೇನಿ ತೇಜ್ ಸಜ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಇಂದು ಅನಾವರಣಗೊಂಡಿದೆ.

ಹನುಮಾನ್ ನಲ್ಲಿ ಸೂಪರ್ ಹೀರೋ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ.

ಕಾರ್ತಿಕ್ ಘಟ್ಟಮನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ ಮಿರಾಯ್ ಎಂಬ ಟೈಟಲ್ ಇಡಲಾಗಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.

ಮಿರಾಯ್ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್​ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಘಟ್ಟಮನೇನಿ ಮಿರಾಯ್​ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರ್ತಿರುವ ಮರೈ ಸಿನಿಮಾವನ್ನು ಏಪ್ರಿಲ್ 18 2025ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights