Thursday, November 20, 2025
24.6 C
Bengaluru
Google search engine
LIVE
ಮನೆ#Exclusive NewsTop Newsನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಬೆಂಗಳೂರು : ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್  ಅವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಈ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.

ಚಿತ್ರ ನಿರ್ಮಾಣದ ಜೊತೆಗೆ ಉದ್ಯಮಿ, ಬಿಲ್ಡರ್‌ ಕೂಡ ಆಗಿರುವ ಸೌಂದರ್ಯ ಜಗದೀಶ್  ಸುದೀಪ್ ನಟನೆಯ ಮಸ್ತ್ ಮಜಾ ಮಾಡಿ, ಅಪ್ಪು ಮತ್ತು ಪಪ್ಪು,  ರಾಮ್‌ಲೀಲಾ, ಸ್ನೇಹಿತರು ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಅವರ ಮಗಳ ಮದುವೆಯನ್ನು  ನೆರವೇರಿಸಿದ್ದರು.

ಇತ್ತೀಚೆಗೆ ಇವರ ಒಡೆತನದ ಜೆಟ್ಲಾಗ್​ನಲ್ಲಿ ಕಾಟೇರ ಸಿನಿಮಾ ಪಾರ್ಟಿ ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ವಿವಾದದ ಬಳಿಕ ಜೆಟ್ಲಾಗ್ ರಸ್ಟೋ ಬಾರ್‌ ಲೈಸನ್ಸ್ 25 ದಿನಗಳ ರದ್ದು ಮಾಡಲಾಗಿತ್ತು. ಪತ್ನಿ ರೇಖಾ ಜಗದೀಶ್ ಈ ಬಾರ್‌ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ.

ಪತ್ನಿ ರೇಖಾ ಜಗದೀಶ್ ಮಗ ನಟ ಸ್ನೇಹಿತ್, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗದವರನ್ನು, ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments