ನವದೆಹಲಿ : ಪಂಚರಾಜ್ಯ ಚುನಾವಣೆ ಬಳಿಕ I.N.D.I.A. ಮೈತ್ರಿಕೂಟವು ಮೊದಲ ಸಭೆಯನ್ನು ದೆಹಲಿಯಲ್ಲಿ ನಡೆಸುತ್ತಿದ್ದಾರೆ. ಇಂದು ದೆಹಲಿಯಲ್ಲಿ ನಡೆಯುತ್ತಿರೋ ಸಭೆಯು ಬಹಳ ಮಹತ್ವ ಪಡೆದುಕೊಂಡಿದ್ದು, ಸಭೆಯಲ್ಲಿ I.N.D.I.A. ನಾಯಕರು ಸೇರಿ ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಪಂಚರಾಜ್ಯ ಚುನಾವಣೆ ಬಳಿಕ ಏನೆಲ್ಲಾ ಬದಲಾವಣೆ..!!
ಕಳೆದ ತಿಂಗಳು ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂಋಉ ರಾಜ್ಯಗಳಲ್ಲಿ ಜಯಭೇರಿಗಳಿಸಿತ್ತು. ಕೇವಲ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಚುಕ್ಕಾಣಿ ಹಿಡಿದಿತ್ತು. ಇದರ ಎಫೆಕ್ಟ್ ಲೋಕಸಭಾ ಚುನಾವಣೆಯಲ್ಲಿ ಆಗಬಾರದು ಅನ್ನೋ ದೃಷ್ಠಿಯಲ್ಲಿ ಇಂದು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲು I.N.D.I.A. ಮೈತ್ರಿಕೂಟ ತೀರ್ಮಾನ ಮಾಡಿದೆ.
ವರ್ಕ್ಔಟ್ ಆಗದ ಉಚಿತ ಗ್ಯಾರಂಟಿಗಳು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನ ಮುಂದಿಟ್ಟು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತ್ತು. ಇದೇ ರೀತಿ ಪಂಚರಾಜ್ಯ ಚುನಾವಣೆಯಲ್ಲೂ ಕೆಲ ಉಚಿತ ಗ್ಯಾರಂಟಿ ಘೋಷಣೆಗಳನ್ನ ಮಾಡಿತ್ತು, ಆದರೆ ಯಾವ ಗ್ಯಾರಂಟಿಗಳಿಗೂ ಮೂರು ರಾಜ್ಯದ ಜನ ಮಣೆ ಹಾಕಿಲ್ಲದೇ ಇರೋದು ಇದೀಗ I.N.D.I.A ಮೈತ್ರಿಕೂಟಕ್ಕೆ ದೊಡ್ಡ ತಲೆನೋವಾಗಿದೆ.
ಲೋಕಸಭೆಗೆ ಯಾವ ಪ್ಲ್ಯಾನ್ ಸಿದ್ಧತೆ..!!
ಲೋಕಸಭೆ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿಯಿದೆ, I.N.D.A.I ಮೈತ್ರಿಕೂಟ ಪ್ರಣಾಳಿಕೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಪ್ರಣಾಳಿಕೆ ರೂಪುರೇಷುಗೆ ಪ್ರಣಾಳಿಕ ಸಮಿತಿ ರಚನೆ ಆಗೋ ಸಾದ್ಯತೆಗಳು ಇದೆ ಎಂದು ಮೂಲಗಳು ತಿಳಿಸಿವೆ.