ಬೀದರ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಾದ ದಿನದಿಂದ ಇಂದಿನ ವರೆಗೆ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಮಾಡಿ ಓಟ್ಟು 32 ಲಕ್ಷ 56ಸಾವಿರ ದಾಖಲೆ ಇಲ್ಲದೆ ಸಾಗಿಸುತ್ತಿದ ಹಣವನ್ನು ಜಪ್ತಿ ಮಾಡಲಾಗಿತ್ತು. ಹಾಗಾಗಿ ಅದನ್ನು ತಡೆಗಟ್ಟಲು ಜಿಲ್ಲೆಯ 18 ಚೆಕ್ ಪೋಸ್ಟ್ಗಳ ಮೇಲೂ ಅಧಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಅಬಕಾರಿ ಇಲಾಖೆ ಇಂದ 145 ಪ್ರಕರಣ ದಾಖಲಾಗಿದ್ದು, ಹಾಗೂ ಅಬಕಾರಿ ತಂಡವು 8.35 ಲಕ್ಷ ರೂ ಮೌಲ್ಯದ 1810 ಲಿಟರ್ ಮದ್ಯ ಜಪ್ತಿ ಮಾಡಲಾಗಿದೆ. ಪೋಲಿಸ್ ಇಲಾಖೆಯಿಂದ 19 ಪ್ರಕರಣ ದಾಖಲಿಸಲಾಗಿದೆ. ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿ ಇಂದ 1 ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಗಡಿಯಲ್ಲಿ ಕಟ್ಟೆಚ್ಚರ ವಹಿಸ ಬೇಕೆಂದು ಮುಂಜಾಗ್ರತವಾಗಿ ಕ್ರಮಕೈಗೊಳ್ಳಲಾಗಿದ್ದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಗೋವಿಂದ ರಡ್ಡಿ ಮಾಹಿತಿ ನೀಡಿದ್ದಾರೆ.