ಮೈಸೂರು ; ಮೈಸೂರು ವಿಮಾನ ನಿಲ್ದಾಣಕ್ಕೆ ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ ಟಿಪ್ಪುನನ್ನು ದೇಶ ದ್ರೋಹಿ ಅಂತಾ ಬಿಂಬಿಸೋದು ಸರಿಯಲ್ಲ. ಟಿಪ್ಪು ಸುಲ್ತಾನ್ ನಮ್ಮ ಊರಿನವರೇ ಅಲ್ವಾ, ಅವರೇನು ಹೊರ ದೇಶದವರಾ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​.ಸಿ.ಮಹದೇವಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಗೂ ನಮ್ಮ ತಕರಾರು ಇಲ್ಲ. ಟಿಪ್ಪು ವಿಚಾರದಲ್ಲಿ ಕೆಲವರು ಅಭಿಪ್ರಾಯ ಹೇಳೋದು ಅಪರಾಧವಾ ಎಂದು ಪ್ರಶ್ನಿಸಿದ್ದಾರೆ. ವಿಮಾನ ನಿಲ್ದಾಣ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಾ ಎಂದಿದ್ದಾರೆ.

ರಾಜ್ಯದಲ್ಲಿ ಕೋವಿಡ್ ವಿಚಾರವಾಗಿ ಮಾತನಾಡಿದ ಅವರು, ಮೈಸೂರು ಜಿಲ್ಲಾಡಳಿತದ ಜೊತೆಗೆ ಸಭೆ ಮಾಡುತ್ತೇನೆ. ಗಡಿ ಜಿಲ್ಲೆಯಾದ ಕಾರಣ ಇವತ್ತೆ ಸಭೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸಂಸತ್​ನಲ್ಲಿ ಸ್ಮೋಕ್ ಬಾಂಬ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಲೆಟರ್ ಕೊಟ್ಟಿದ್ದರೆ ಮೈಸೂರು ಗತಿ ಏನಾಗುತ್ತಿತ್ತು? ಬೇರೆ ಧರ್ಮದವರು ಲೇಟರ್ ಕೊಟ್ಟಿದ್ದರೆ ಗತಿ ಏನಾಗುತ್ತಿತ್ತು? ಲೆಟರ್ ಕೊಟ್ಟಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಒಂದೊಂದು ಬಾರಿ ಗಡಿಪಾರು ಆದವರು, ಕೊಲೆ ಆರೋಪಿಗಳು ನಮ್ಮ ಜೊತೆಯೆ ಫೋಟೋ ತೆಗೆಸಿ ಕೊಂಡಿರುತ್ತಾರೆ, ಅದನ್ನು ನಾವು ಗಮನಿಸುವುದಕ್ಕೆ ಆಗುತ್ತಾ ಎಂದು ಮಹದೇವಪ್ಪ ಹೇಳಿದರು‌.

By admin

Leave a Reply

Your email address will not be published. Required fields are marked *

Verified by MonsterInsights