ಕಲಬುರಗಿ : ಈ ಸರ್ಕಾರಗಳು ದುಡ್ಡು ಇರೋ ವ್ಯಕ್ತಿಗಳಿಗೆ ಮಾತ್ರ ಟಿಕೇಟ್ ನೀಡುತ್ತಾರೆ. ಒಂದು ರೀತಿಯ ಅಂಕಿ ಅಂಶಗಳ ಪ್ರಕಾರ ಸಾಮಾನ್ಯ ಎಮ್ಎಲ್ಎ ಗಳಿಗೆ 17 ಕೋಟಿ ರೂ. ಜೆಡಿಎಸ್ ಎಮ್ಎಲ್ಎ ಗಳಿಗೆ 20 ಕೋಟಿ ರೂ ಕಾಂಗ್ರೆಸ್ MLA ಗಳಿಗೆ 60 ಕೋಟಿ ರೂ ಕೊಡ್ತಾರೆ.
ಕೋಟಿ ಕೋಟಿ ದುಡ್ಡಿರೋ ವ್ಯಕ್ತಿಗಳಿಗೆ ಮಾತ್ರ ಟಿಕೇಟ್ ನೀಡುತ್ತಾರೆ. ಹೀಗಾಗಿ ಸರ್ಕಾರಗಳು ಹಣ ಇದ್ದವರಿಗೆ ಮಾತ್ರ ಟಿಕೇಟ್ ನಿಡೋದು ವಿಪರ್ಯಾಸವಾಗಿಬಿಟ್ಟಿದೆ. ಸತೀಶ್ ಜಾರಕಿಹೊಳಿ ಅವರು ರಾಮ ಮಂದಿರ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕೆಂದರು. ಬಸವಣ್ಣ, ಬುದ್ದ , ಅಂಬೇಡ್ಕರ್ ಇವರೆಲ್ಲಾ ಮಂದಿರಗಳು ಗುಡಿ ಗುಂಡಾರ ಒಪ್ಪಿದವರಲ್ಲ ಎಂದು ಹೇಳಿದರು.
ಚುನಾವಣೆ ಹಂತದಲ್ಲಿ ಇವರು ಯಾವ ಹಂತಕ್ಕಾದರೂ ಹೊಗ್ತಾರೆ. ರಾಜ್ಯ ಸರಕಾರವೂ ಸಹ ಕುಟುಂಬ ರಾಜಕಾರಣ ಮಾಡುತ್ತಿದೆ. ಅವರು ಪುತ್ರರಿಗೆ, ಪುತ್ರಿಯರಿಗೆ, ಸೊಸೆಯರಿಗೆ, ಅಳಿಯರಿಗೆ ಕೊಡುತ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ಒಳ್ಳೆಯದಲ್ಲ ರಾಜ್ಯಕ್ಕೂ ಒಳ್ಳೆಯದಲ್ಲ ಎಂದು ಕಲಬುರಗಿಯಲ್ಲಿ ನಟ ಚೇತನ್ ಹೇಳಿದ್ದಾರೆ.