ಗದಗ: ನಗರದ ಮುಳುಗುಂದ ನಾಕಾ ಬಳಿ ಇರುವ ಕಿಯಾ ಕಾರ್ ಶೋ ರೂಮ್ನ ದೊಡ್ಡ ಗೇಟ್ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಮೃತ ವ್ಯಕ್ತಿಯು ಹಿರೇಕೊಪ್ಪ ಗ್ರಾಮದ ವಿನಯ್ ಗಿಡ್ಡಮಲ್ಲಣ್ಣವರ(43) ಎಂದು ಗುರುತಿಸಲಾಗಿದೆ. ಶೋ ರೂಮ್ ಗೇಟ್ ಕುರಿಸುವ ಕೆಲಸ ನೆಡೆಯುತ್ತಿತ್ತು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಮೃತ ವ್ಯಕ್ತಿ ಗೇಟ್ ಕೆಲಸ ಮಾಡುವ ಕೆಲಸಗಾರನಿರಬಹುದು ಎಂದು ಸ್ಥಳದಲ್ಲಿ ಇದ್ದ ಸಾರ್ವಜನಿಕರ ಹೇಳುತ್ತಿದ್ದಾರೆ.
ಕಾರ್ಮಿಕರು ಕೇಲಸ ಮಾಡುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಅಮಾಯಕ ವ್ಯಕ್ತಿಯೊಬ್ಬ ಅನ್ಯಾಯವಾಗಿ ಬಲಿ ಆಗಿದ್ದಾನೆ. ಗದಗ ಶಹರ ಪೊಲೀಸ್ ಠಾಣೆಯ ವ್ತಾಪ್ತಿಯಲ್ಲಿ ಈ ದುರ್ಘಟನೆ ನೆಡೆದಿದೆ.