ಬಾಗಲಕೋಟೆ : ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲರ ಕೋಮು ದ್ವೇಷ ರಾಜಕಾರಣಕ್ಕೆ ಮಾದಿಗರು ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಬಾಗಲಕೋಟೆಯಲ್ಲಿ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆನ್ನೂರು ಹೇಳಿದರು.
ಬಾಗಲಕೋಟೆಯ ನವನಗರದಲ್ಲಿ ಮಾತನಾಡಿದ ಮುತ್ತಣ್ಣ ಬೆನ್ನೂರ, ಸಚಿವ ಶಿವಾನಂದ ಪಾಟೀಲರು ಇತ್ತೀಚಿಗೆ ಬಸವನಬಾಗೇವಾಡಿ ಪಟ್ಟಣದಲ್ಲಿ ಮುಸ್ಲಿಂ ಹಾಗೂ ಮಾದಿಗ ಸಮಾಜದ ಮಧ್ಯೆ ಕೋಮು ದ್ವೇಷ ಬಿತ್ತಲು, ಮುಸ್ಲಿಂ ಸಮಾಜದವರನ್ನ ದಲಿತರ ಮೇಲೆ ಎತ್ತಿ ಕಟ್ಟಿ ಸುಳ್ಳು ಪ್ರಕರಣವನ್ನು ದಾಖಲಿಸಿ, ಕೋಮು ದ್ವೇಷಕ್ಕೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು.
ಸರ್ಕಾರದಲ್ಲಿ ಸಚಿವರಾಗಿದ್ದುಕೊಂಡು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಸಚಿವ ಶಿವಾನಂದ ಪಾಟೇಲರಿಗೆ ಸ್ವಲ್ಪ ಆದರೂ ಸಾಮಾಜಿಕ ಪ್ರಜ್ಞೆ ಇದೆಯಾ….? ಬಸವ ನಾಡಿನ ಕರ್ಮ ಭೂಮಿಯಲ್ಲಿ ರಾಜಕಾರಣ ಮಾಡುತ್ತಿರುವ ಶಿವಾನಂದ ಪಾಟೀಲರು ಸಾಮಾಜಿಕ ಭದ್ಧತಿಯಿಂದ ನಡೆದುಕೊಳ್ಳಬೇಕಾಗಿತ್ತು.
ಶಿವಾನಂದ ಪಾಟೀಲರೇ ಬಾಗಲಕೋಟೆಗೆ ಕೈ ಅಭ್ಯರ್ಥಿ ಹಾಕಿದ್ದಿರಿ, ಬಾಗೇವಾಡಿಯಲ್ಲಿ ದಲಿತರ ಮೇಲೆ ನಡೆಸಿದ ದಬ್ಬಾಳಿಕೆ ಬಾಗಲಕೋಟೆಯಲ್ಲಿ ನಡೆಯೋದಿಲ್ಲ. ಶೀಘ್ರದಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಗೋ ಬ್ಯಾಕ್ ಶಿವಾನಂದ ಪಾಟೀಲ್ ಅಭಿಯಾನ ಆರಂಭವಾಗುತ್ತದೆ. ಮಾದಿಗ ಅಭಿವೃದ್ಧಿಕ್ಷೆಮಾಭಿವೃದ್ಧಿ ಸಂಘ ಖಡಕ್ ಎಚ್ಚರಿಕೆ ನೀಡಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಘೋಷಣೆ ಕುಗಿ ಆಕ್ರೋಶ ವ್ಯಕ್ತ ಪಡಿಸಿದರು..