ಧಾರವಾಡ : ಬರಗಾಲದಿಂದ ತತ್ತರಿಸಿರುವ ಅನ್ನದಾತರು ದನಕರುಗಳ ಮೇವಿಗಾಗಿ ಟ್ಯಾಂಕರ್ ಮೂಲಕ ಜಮೀನಿಗೆ ನೀರು ಹರಿಸುತ್ತಿದ್ದಾರೆ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ರೈತ ಮಲ್ಲಪ್ಪ ಕಲ್ಲನವರು 2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡಿದ್ದ ಈ ರೈತ 6 ದನಕರುಗಳನ್ನು ಹೊಂದಿದ್ದಾನೆ. ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಂತಾಗುತ್ತೆ ಎಂದು ಒಂದು ಟ್ಯಾಂಕರ್ ನೀರಿಗೆ 450 ರೂಪಾಯಿ ನೀಡಿ, ಎರಡು ಏಕರೆ ಜಮೀನಿಗೆ ಐದು ಟ್ಯಾಂಕರ್ ನೀರು ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಸಹಾಯಕ್ಕೆ ಬರಲು ಮನವಿ ಮಾಡಿದರು.


