Friday, January 30, 2026
20 C
Bengaluru
Google search engine
LIVE
ಮನೆಕ್ರೈಂ ಸ್ಟೋರಿರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಬೆಂಗಳೂರಿನ ಸಮೀಪವೇ ಬಾಂಬ್ ತಯಾರಿ !

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಬೆಂಗಳೂರಿನ ಸಮೀಪವೇ ಬಾಂಬ್ ತಯಾರಿ !

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬಾಂಬರ್ ಪತ್ತೆಗೆ ಪ್ರಮುಖ ಸಂಚುಕೋರ ಮುಜಮಿಲ್ ಷರೀಫ್ ನ ತೀವ್ರ ವಿಚಾರಣೆ ನಡೆಸಲಾಗಿತ್ತು. ಮೂಡಿಗೆರೆ ಮೂಲದ ಮುಜವಿರ್ ಶರೀಫ್ ಈಗಾಗಲೇ ಮುಜಾವಿರ್ ನನ್ನ 7 ದಿನ ಕಸ್ಟಡಿಗೆ NIA ತೆಗೆದುಕೊಂಡಿದ್ದರು.

ಪ್ರಾಥಮಿಕ ವಿಚಾರಣೆ ವೇಳೆ ಮುಸಾವಿರ್ ಹುಸೇನ್ ಶಾಜೀದ್, ಮತ್ತು ಅಬ್ದುಲ್ ಮತೀನ್ ಅಹ್ಮದ್ ತಾಹಾ ಬಗ್ಗೆ ಮಾಹಿತಿ ನೀಡಿದ್ದ. ಮುಜವಿರ್ ಮಾಹಿತಿ ಮೇರೆಗೆ ಮುಸಾವಿರ್, ಅಬ್ದುಲ್​ ಬೇಟೆಯನ್ನೂ ಸಹ ಶುರು ಮಾಡಿದ್ದರು. ಪೊಲೀಸರು ಈ ಇಬ್ಬರ ಪತ್ತೆಯನ್ನೂ ಸಹ ಮಾಡಿದ್ದಾರೆ.

ಆದರೆ ಇದೀಗ ಬೆಳಕಿಗೆ ಬಂದಿರುವ ವಿಚಾರವೆಂದರೆ  ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಬಳಸಲಾದ ಬಾಂಬ್​ ಅನ್ನು​ ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಪೊಲೀಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬಾಂಬ್ ತಯಾರಿಸಲು​ ಶಂಕಿತ ಉಗ್ರರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು.

ಬಾಂಬ್​ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಕೆಲವನ್ನು ಆನ್ ಲೈನ್‌ ಮೂಲಕ ಮತ್ತು ಇನ್ನು ಕೆಲವುಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಡೆಟೋನೇಟರ್, ಟೈಮರ್, ಬ್ಯಾಟರಿ ಹಾಗೂ ರಂಜಕವನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದಾರೆ. ಉಳಿದಂತೆ ನಟ್, ಬೋಲ್ಟ್, ಕೆಲ ವೈಯರ್​ಗಳನ್ನು ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ.

ಈ ಸಾಮಾಗ್ರಿಗಳನ್ನು ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಖರೀದಿಸಿ, ಬಾಂಬ್​ ತಯಾರಿಸುತ್ತಿದ್ದ ಶಂಕಿತ ಅಬ್ದುಲ್​ ಮತೀನ್ ತಾಹ ಮತ್ತು ಮುಸಾವೀರ್ ನೀಡುತ್ತಿದ್ದನು ಎಂಬ ಶಂಕೆ ವ್ಯಕ್ತವಾಗಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಹೊರವಲಯದಲ್ಲಿ ಶಂಕಿತ ಉಗ್ರರು ಐಇಡಿಯನ್ನು ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ. ಮತೀನ್ ಹಾಗೂ ಮುಸಾವೀರ್ ಜೊತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದನು. ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments