ಬೆಂಗಳೂರು : ಆರ್ಸಿಬಿ ಅಭಿಮಾನಿಯೊಬ್ಬ ಐಪಿಎಲ್ ಪಂದ್ಯದ ವೇಳೆ ನುಗ್ಗಿ ಕೊಹ್ಲಿ ಕಾಲು ಹಿಡಿದ ಘಟನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದೆ.
ರೈಲಿನಲ್ಲಿ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತ ಯುವಕ ಮೂರು ಸಾವಿರ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ, ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದ ಇವನು ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆ.
ಹಿಂಬದಿ ಸೀಟ್ ನಲ್ಲಿರೋರು ವಿರಾಟ್ ಹೋಗಿ ಹಿಡಿದುಕೋ ಎಂದು ಕೂಗ್ತಿದ್ರು ಹಾಗಾಗಿ ತಾನು ಗ್ರಿಲ್ ಹಾರಿ ಮೈದಾನದ ಒಳಗೆ ಬಂದು ವಿರಾಟ್ ಕಾಲು ಹಿಡಿದಿದುಕೊಂಡೆ ಎಂದು ಹೇಳಿದ್ದಾನೆ. ಸದ್ಯ ಕರ್ತವ್ಯಕ್ಕೆ ಅಡ್ಡಿ, ಮೈದಾನದಲ್ಲಿ ಅತಿಕ್ರಮಣ ಪ್ರವೇಶದಡಿ ಕೇಸ್ ದಾಖಲುಲಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆಯನ್ನ ನಡೆಸುತ್ತಿದ್ದಾರೆ.


