ಬೆಂಗಳೂರು : ಕೊನೆಗೂ ದಳಪತಿಗಳ ಪಾಲಾಯ್ತು ಮಂಡ್ಯ ಲೋಕಸಭಾ ಕ್ಷೇತ್ರ ?? ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದವರೇ ಅಭ್ಯರ್ಥಿ?? ಮಂಡ್ಯ ಕ್ಷೇತ್ರದಿಂದ ಕಾರ್ಯಕರ್ತರು ಸ್ಪರ್ಧೆ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಮಂಡ್ಯ ನಾಯಕರ ಜೊತೆಗಿನ ಸಭೆಯಲ್ಲೂ ದೇವೇಗೌಡರ ಕುಟುಂಬದವರೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡುತ್ತಿದ್ದರು.
ಈ ಮೊದಲು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿ ಎಸ್ ಪುಟ್ಟರಾಜು ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿತ್ತು. ಮಂಡ್ಯ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರಿಂದ ಸ್ಪರ್ಧೆಗೆ ಒತ್ತಾಯಿಸಲಾಗಿತ್ತು. ಆದರೆ ಈಗ ಕುಮಾರಸ್ವಾಮಿ ಅಥವಾ ನಿಖಲ್ ಇಬ್ಬರಲ್ಲಿ ಒಬ್ಬರ ಸ್ಪರ್ಧೆ ಫಿಕ್ಸ್..?? ಎಂಬ ಪ್ರಶ್ನೆ ಉಂಟಾಗಿದೆ.
ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧೆ ಮಾಡಲಿ ಎಂದು ಸಿ ಎಸ್ ಪುಟ್ಟರಾಜು ಅವರೇ ಹೇಳಿದ್ದರು. ಭಾನುವಾರವೂ ಸಹ ಕುಮಾರಸ್ವಾಮಿ ಸ್ಪರ್ಧಿಸುವಂತೆ ಬೆಂಗಳೂರಿಗೆ ಬಂದಿದ್ದ ನೂರಾರು ಮಂಡ್ಯ ಕಾರ್ಯಕರ್ತರು ಒತ್ತಾಯಿಸಿದರು.
ಇಂದು ಸಂಜೆ ಒಳಗೆ ಮಂಡ್ಯ ಸೇರಿ ಮೂರು ಅಭ್ಯರ್ಥಿಗಳನ್ನ ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ. ಈಗಾಗಲೇ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನ ದೇವೇಗೌಡರು ಘೋಷಿಸಿದ್ದಾರೆ. ಬಹುತೇಕವಾಗಿ ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆಂಬುದು ನಿಖರವಾಗಿದೆ.
ಬಿಜೆಪಿ ವರಿಷ್ಠರಾದ ಅಮಿತ್ ಶಾ ಅವರು ಸಹ ಕುಮಾರಸ್ವಾಮಿ ಅವರಿಗೆ ಸ್ಪರ್ಧೆ ಮಾಡುವಂತೆ ಸೂಚನೆಯನ್ನ ನೀಡಿದ್ದರು. ಪಕ್ಷದ ಮುಖಂಡರ ಜೊತೆಗೆ ಚರ್ಚೆ ನಡೆಸಿ ಇಂದು ಕುಮಾರಸ್ವಾಮಿ ಘೋಷಣೆ ಮಾಡಲಿದ್ದಾರೆ. ಕೋಲಾರದಿಂದ ಸಮೃದ್ಧಿ ಮಂಜುನಾಥ್ ಹಾಗೂ ಮಲ್ಲೇಶ್ ಬಾಬು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಮಂಜುನಾಥ್ ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.