ಹುಬ್ಬಳ್ಳಿ: ಇಂಡಿಯಾ ಒಕ್ಕೂಟ ಮೈತ್ರಿ ಪಕ್ಷದ ಡಿಎಂಕೆ ನಾಯಕ ನಮ್ಮ ಒಕ್ಕೂಟ ಅಧಿಕಾರಕ್ಕೆ ಬಂದ್ರೆ, ಮೇಕೆದಾಟು ತಡೆಯುತ್ತೇವೆ ಎಂದಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್‌ನ ಸಿಎಂ ಹಾಗೂ ಡಿಸಿಎಂ ರವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಒತ್ತಾಯಿದರು.
ಮೇಕೆದಾಟು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಯೋಜನೆ ಬಗ್ಗೆ ಮಾತಾಡಿಲ್ಲ, ಸಿಎಂ ಹಾಗೂ ಡಿಸಿಎಂ ಅವರ ಕೈಯಲ್ಲಿ ಆಗಿಲ್ಲ ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ಡಿಎಂಕೆ ಪಕ್ಷ ತಮ್ಮ ಮ್ಯಾನೊಫೇಸ್ಟ್‌ನಲ್ಲಿ ಯೋಜನೆ ತಡೆ ಬಗ್ಗೆ ಘೋಷಣೆ ಮಾಡಿದೆ, ಇದಕ್ಕೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಪ್ರಶ್ನೆ ಮಾಡಿದರು.
ಕೆ ಎಸ್ ಈಶ್ವರಪ್ಪನವರ ಬಂಡಾಯ:
ಕೆಎಸ್ ಈಶ್ವರಪ್ಪನವರ ಮುನ್ನಿಸು ಕುರಿತು ಈಗಾಗಲೇ ಪಕ್ಷದ ವರಿಷ್ಠರುಬಸರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಅಸಮಧಾನ ಸರಿ ಹೋಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ವಿಚಾರ:
ಧಾರವಾಡ ಬೆಳಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರು, ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಇಡಿ ದೇಶದಲ್ಲಿ ಈಗ ಬಿಜೆಪಿ ಒಕ್ಷ ಬಾರಿ ಒ್ರಬಲವಾಗಿ ಬೆಳೆದು ನಿಂತಿದೆ. ನರೇಂದ್ರ ಮೋದಿಯವರ ನಾಯಕತ್ವದೊಂದಿಗೆ, ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿಗಳು ನೀಡಿರುವ ಯೋಜನೆಗಳು ಜನ ಮುಂದೆ ಇವೆ. ಹಾಗಾಗಿ ಈ ಬಾರಿ ಚುನಾವಣೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆಯಾಗಿದೆ. ರಾಜ್ಯ ಸೇರಿ ದೇಶದಲ್ಲಿ ಬಹುತೇಕ ಬಿಜೆಪಿ ಅಭ್ಯರ್ಥಿಗಳ ಜಯಭೇರಿ ಬಾರಿಸುತ್ತಾರೆ ಎಂದು ಹೇಳಿದರು.
ಗೋ ಬ್ಯಾಕ್ ಶೆಟ್ಟರ್ ಹಿಂದೆ ಕೆಲವು ವ್ಯಕ್ತಿಗಳಿದ್ದಾರೆ:
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೋಬ್ಯಕ್ ಶೆಟ್ಟರ ವಿಚಾರವಾಗಿ ಪ್ರತಿಕ್ರೆಯೆ ನೀಡಿ, ಇದರ ಹಿಂದೆ ಕೆಲವು ವ್ಯಕ್ತಿಗಳಿದ್ದಾರೆ. ಅವರು ತಮ್ಮ ಸ್ವ ಹಿತಾಸಕ್ತಿಗಾಗಿ ಇದೆಲ್ಲವನ್ನೂ ಮಾಡುತ್ತಿದ್ದಾರೆ, ಅದೂ ಬಹಳ ದಿನ ನಿಲ್ಲುವುದಿಲ್ಲ. ಕೆಲವು ವ್ಯಕ್ತಿಗಳ ಅಭಿಪ್ರಾಯ ಬೇರೆ, ಜನರ ಅಭಿಪ್ರಾಯಯವೇ ಬೇರೆಯಾಗಿದೆ. ಈ ಹಿಂದಿನ ನಾಲ್ಕೈದು ಚುನಾವಣೆಯಲ್ಲಿ ಬೆಜೆಪಿ ಅಭ್ಯರ್ಥಿಯೇ ಗೆದಿದ್ದಾರೆ. ಸುರೇಶ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿಯವರು ಜಯಭೇರಿ ಬಾರಿಸಿರುವುದು ಕಣ್ಮುಂದೆ ಇದೆ. ಬೆಳಗಾವಿ ಲೋಕಸಭಾ ಅಭ್ಯರ್ಥಿ ಈ ಬಾರಿಯು ಅತೀ ಹೆಚ್ಚು ಲೀಡ್‌ನಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುತ್ತಾರೆ. ಬೆಳಗಾವಿ ಟಿಕೆಟ್ ಘೋಷಣೆ ಬಳಿಕ ನಾನು ಬೆಳಗಾವಿ ವೀಸಿಟ್ ಮಾಡಿ, ಎಲ್ಲರೊಂದಿಗೆ ಭೇಟಿ ಮಾಡಿ ಮಾತಾಡುತ್ತೇನೆ. ಅಲ್ಲಿ ಗೆಲ್ಲವು ಮಾತ್ರ ನಿಶ್ಚಿತ, ಟಿಕೆಟ್ ಘೋಷಣೆಯ ಬಳಿಕೆ ಲೀಡ ಬಗ್ಗೆ ಮಾತಾಡುತ್ತೇನೆ.ಇಂದು ನಾಳೆ ಟಿಕೆಟ್ ಘೋಷಣೆ ಆಗುತ್ತದೆ ಎಂದು ತಿಳಿಸಿದರು.
ರಷ್ಯಾ ಮಾಸ್ಕೋ ದಾಳಿ ವಿಚಾರ
ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಯ ಇದೆ. ಇದರ ಬಗ್ಗೆ ಅವರು ಟ್ಯಾಕಲ್ ಮಾಡುತ್ತಾರೆ. ಭಾರತದ ನಿಲ್ಲವಿನಬಗ್ಗೆ ಪ್ರಧಾನಿಗಳು ಹೇಳುತ್ತಾರೆ. ಭಯೋತ್ಪಾದಕ ಚಟುವಟಿಕೆಗಳು ಜಗತ್ತಿನಲ್ಲಿ ನಿಲ್ಲಬೇಕು. ಇಡಿ ವಿಶ್ವದಲ್ಲಿ ಶಾಂತಿ ನೆಲ್ಲುಸಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳುವ ಮೂಲಕ ಘಟನೆಯನ್ನು ಖಂಡಿಸಿದರು