BJP ವಿಧಾನ ಪರಿಷತ್ ಸದಸ್ಯ ತೇಜಸ್ವಿನಿ ಗೌಡ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿಗೂ ವಿದಾಯ ಹೇಳಿದ್ದಾರೆ. ತೇಜಸ್ವಿನಿ ಅವರು ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ.
ನಿನ್ನೆಯಷ್ಟೇ ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ಕೂಡಾ ಕಾಂಗ್ರೆಸ್ ಸೇರಲಿದ್ದಾರೆ. ಡಾ ತೇಜಸ್ವಿನಿಗೌಡ ಮತ್ತು ಮರಿತಿಬ್ಬೇಗೌಡ ಅವರ ಸದಸ್ಯತ್ವದ ಅವಧಿ ಇದೇ ಜೂನ್‌ನಲ್ಲಿ ಅಂತ್ಯವಾಗಲಿದೆ.
2004ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ತೇಜಸ್ವಿನಿ ಗೌಡ ಅವರು ಮಾಜಿ ಪ್ರಧಾನಿಗಳಾಗಿರುವ ಹೆಚ್ ಡಿ ದೇವೇಗೌಡರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿದ್ದರು.