Saturday, September 13, 2025
22.9 C
Bengaluru
Google search engine
LIVE
ಮನೆ#Exclusive NewsTop NewsArvindKejriwal; ದೆಹಲಿ ಸಿಎಂ ಅರೆಸ್ಟ್- ಇಂದು ಮೆಡಿಕಲ್ ಟೆಸ್ಟ್

ArvindKejriwal; ದೆಹಲಿ ಸಿಎಂ ಅರೆಸ್ಟ್- ಇಂದು ಮೆಡಿಕಲ್ ಟೆಸ್ಟ್

ಎಲ್ಲರೂ ನಿರೀಕ್ಷೆ ಮಾಡಿದಂತೆಯೇ ಆಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ಅಬಕಾರಿ ಹಗರಣ (Delhi liquor Scam) ಸಂಬಂಧ ಪ್ರಮುಖ ಘಟ್ಟವೊಂದು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆವಿಷ್ಕಾರಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮನಿಲಾಂಡ್ರಿಂಗ್ ವ್ಯವಹಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್​ರನ್ನು(Arvind Kejriwal arrest) ನಾಟಕೀಯ ಪರಿಣಾಮಗಳ ನಡುವೆ ಇ.ಡಿ ಬಂಧಿಸಿದೆ. ಬಂಧನದಿಂದ ರಕ್ಷಣೆ ಒದಗಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ ಕೆಲವೇ ಘಂಟೆಗಳಲ್ಲಿ ಇದು ಘಟಿಸಿದೆ.

ಗುರುವಾರ ಸಂಜೆ 7 ಗಂಟೆಗೆ ಶುರುವಾದ ಹಠಾತ್ ಪ್ರಹಸನ ಅರವಿಂದ್ ಕೇಜ್ರಿವಾಲ್ ಬಂಧನದೊಂದಿಗೆ ಮುಗಿಯಿತು. ಮೊದಲು ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಕೇಜ್ರಿವಾಲ್ ನಿವಾಸಕ್ಕೆ ಸರ್ಚ್ ವಾರೆಂಟ್​ ಜೊತೆ ಬಂದ 12 ಅಧಿಕಾರಿಗಳು, ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕೇಜ್ರಿವಾಲ್ ಸೇರಿ ಕುಟುಂಬಸ್ಥರ ಮೊಬೈಲ್​, ಲ್ಯಾಪ್​ಟಾಪ್​ಗಳನ್ನು ಸೀಜ್ ಮಾಡಿದರು. ರಾತ್ರಿ.9.11ಕ್ಕೆ ಕೇಜ್ರಿವಾಲ್ ಬಂಧಿಸಿದರು. ಈ ಮೂಲಕ ಅಧಿಕಾರದಲ್ಲಿದ್ದಾಗಲೇ ಅರೆಸ್ಟ್ ಆದ ಮೊದಲ ಸಿಎಂ ಎಂಬ ಕುಖ್ಯಾತಿಗೆ ಕೇಜ್ರಿವಾಲ್ ಪಾತ್ರರಾದರು. ರಾತ್ರಿ 11 ಗಂಟೆಗೆ ಇಡಿ ಕಚೇರಿಗೆ ಕೇಜ್ರಿವಾಲ್​ರನ್ನು ಅಧಿಕಾರಿಗಳು ಕರೆದೊಯ್ದರು.

ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಅರವಿಂದ್ ಕೇಜ್ರಿವಾಲ್​ರನ್ನು ಒಳಪಡಿಸಲಿರುವ ಇಡಿ ಅಧಿಕಾರಿಗಳು, ನಂತರ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಅನುಮತಿ ಪಡೆದು ಅರವಿಂದ್ ಕೇಜ್ರಿವಾಲ್​ರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ಪ್ರಕರಣದಲ್ಲಿ ಕಳೆದ ಗುರುವಾರವಷ್ಟೇ ಬಿಆರ್​ಎಸ್​ ನಾಯಕಿ ಕಲ್ವಕುಂಟ್ಲ ಕವಿತಾರನ್ನು ಇ.ಸಿ ಬಂಧಿಸಿತ್ತು.

ಕೇಜ್ರಿವಾಲ್ ನಿವಾಸದ ಬಳಿ ಟೆನ್ಶನ್ ಟೆನ್ಶನ್

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಸಂದರ್ಭದಲ್ಲಿ ಅವರ ನಿವಾಸದ ಮುಂದೆ ಭಾರೀ ಪ್ರತಿಭಟನೆಗಳು ನಡೆದವು. ದೊಡ್ಡಮಟ್ಟದಲ್ಲಿ ಧಾವಿಸಿ ಬಂದಿದ್ದ ಆಮ್ ಆದ್ಮಿ ಪಕ್ಷದ ನೇತಾರರು, ಕಾರ್ಯಕರ್ತರು, ಕೇಜ್ರಿವಾಲ್ ಪರವಾಗಿ,ಇ.ಡಿ,ಬಿಜೆಪಿ ವಿರುದ್ಧವಾಗಿ ಘೋಷಣೆ ಕೂಗಿದರು. ಪೊಲೀಸರು ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದೇ ಎಲ್ಲರನ್ನು ವಶಕ್ಕೆ ಪಡೆ

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments