ಹುಬ್ಬಳ್ಳಿ : ರಾಜ್ಯ ಬಿಜೆಪಿ (BJP) ಪಾಲಿನ ಮತ್ತೊಂದು ಭದ್ರಕೋಟೆಯೆಂದರೆ ಅದು ಹುಬ್ಬಳ್ಳಿ-ಧಾರವಾಡ ಜಿಲ್ಲೆಯ. ಈ ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ಫೈನಲ್ ಗೆ ತೀವ್ರ ಕಸರತ್ತು ನಡೆಸಲಾಗುತ್ತಿದೆ.
28 ವರ್ಷಗಳ ಬಳಿಕ ಈ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪಣ ತೊಟ್ಟಂತೆ ಕಾಣುತ್ತಿದೆ. ಧಾರವಾಡದಲ್ಲಿ ಮತ್ತೊಂದು ವಿಜಯಪತಾಕೆ ಹಾರಿಸಲು ತಂತ್ರ ರೂಪಿಸಿದೆ.
ಇಲ್ಲಿ ಕಾಂಗ್ರೆಸ್ ನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಾಂಗನವರ್, ಹುಬ್ಬಳ್ಳಿಯ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಮಾಟ್ ಹಾಗೂ ನವಲಗುಂದದ ಯುವ ವಿನೋದ್ ಅಸೂಟಿ ಇವರ ಮದ್ಯೆ ಟಿಕೆಟ್ಗಾಗಿ ತೀವ್ರ ಸ್ಪರ್ಧೆ ಉಂಟಾಗಿತ್ತು. ಪ್ರಬಲ ಸ್ಪರ್ಧಿಯ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಕೊನೆಗೂ ನವಲಗುಂದ ಯುವ ನಾಯಕ ವಿನೋದ್ ಅಸೂಟಿಯ ಬೆಂಬಲಕ್ಕೆ ಬಂದಿದೆ. ಇವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ 5ನೇಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರೋ ಜೋಶಿ vs ಅಸೂಟಿ ಫೈಟ್ ಫಿಕ್ಸ್ ಆಗಿದೆ. ಕಳೆದೊಂದು ತಿಂಗಳಿಂದ ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು ಅಸೂಟಿಯವರು,ಕೊನೆಗೂ ಅವರ ಹೆಸರೇ ಫೈನಲ್ ಆಗಿದೆ .