ದೆಹಲಿಯಲ್ಲೂ ಮಂಡ್ಯ ಗೌಡ್ತಿ ಪಟ್ಟು ಸಡಿಲಿಸುತ್ತಿಲ್ಲ. ಚಿಕ್ಕಬಳ್ಳಾಪುದಿಂದ ಸ್ಪರ್ಧೆ ಅನ್ನೋದೆಲ್ಲಾ ಊಹಾಪೋಹ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ. ಬಿಜೆಪಿ ಹೈಕಮಾಂಡ್ಗೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲೇ ಯಾಕೆ ಚುನಾವಣೆಗೆ ನಿಲ್ಲಬೇಕು ಎಂಬ ಬಗ್ಗೆ ನಾನು ಮೊದಲೇ ವಿವರಿಸಿದ್ದೇನೆ. ಸಕ್ಕರೆ ನಾಡಲ್ಲಿ ಕಮಲ ಅರಳಿಸಲು ಇರುವ ಅವಕಾಶವನ್ನು ನಾನು ತಿಳಿಸಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಕಟ್ಟಲು ನಾವೆಲ್ಲಾ ಶ್ರಮಿಸಿದ್ದೇವೆ ಎಂದು ಮನವರಿಕೆಯನ್ನೂ ಸಹ ನಾನು ಮಾಡಿದ್ದೇನೆ.
ಮಂಡ್ಯದಲ್ಲಿ ಬಿಜೆಪಿ ಬಲ ಪಡಿಸಲು ನಾನು ಸಿದ್ಧ ಎಂದು ಹೇಳಿದ್ದೇನೆ. ಆದರೆ ಈಗ ಯಾವ ಕ್ಷೇತ್ರ ಖಾಲಿ ಇರುತ್ತೆ ಅದಕ್ಕೆ ಸುಮಲತಾ ಅಂತಿದ್ದಾರೆ, ಇದಕ್ಕೆ ನಾನು ಒಪ್ಪುವುದಿಲ್ಲ. ನಾನು ಮಂಡ್ಯ ಬಿಟ್ಟು ಬೇರೆಲ್ಲೂ ನಿಲ್ಲಲ್ಲ. ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.