ಚಿಕ್ಕೋಡಿ ಲೋಕಸಭೆಯಿಂದ ಸಚಿವ ಸತೀಶ್ ಜಾರಕಿಹೊಳಿ ಮಗಳಾದ ಪ್ರಿಯಾಂಕಾ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಎರಡನೇಯ ಬಾರಿಗೆ ದೆಹಲಿ ಹಾರಲು ಪ್ರಯತ್ನಿಸುತ್ತಿದ್ದಾರೆ. ಅಣ್ಣಾ ಸಾಹೇಬ ಜೊಲ್ಲೆಯವರು ಎಕ್ಸಂಬಾ ಗ್ರಾಮದವರೆ ಆಗಿರುವುದರಿಂದ ಎಲ್ಲೊ ಒಂದ ಕಡೆಗೆ ಸತೀಶ್ ಹಾಗೂ ಶಾಸಕ ಹುಕ್ಕೇರಿಯನ್ನು ದೂರ ಇಟ್ಟಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ನಿನ್ನೆ ಸತೀಶ್ ಜಾರಕಿಹೊಳಿಯವರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಎಲ್ಲ ಹಾಲಿ, ಮಾಜಿ ಶಾಸಕರನ್ನು ಭೇಟಿ ಮಾಡಿದರು. ಆದರೆ, ಚಿಕ್ಕೋಡಿಯ ಜಿಲ್ಲಾ ಕಾಂಗ್ರೆಸ್ ಕಛೇರಿ ಸಭೆ ಸೇರಿ, ಜಾರಕಿಹೊಳಿ ಭೇಟಿಯ ಎಲ್ಲ ಕಡೆಯಲ್ಲಿ ಜಾರಕಿಹೊಳಿಯಿಂದ ಪ್ರಕಾಶ ಹುಕ್ಕೇರಿ ದೂರ ಕಾಯ್ದುಕೊಂಡಿದ್ದು, ಎಲ್ಲೆಡೆ ಹುಕ್ಕೇರಿ ಕುಟುಂಬ ಗೈರಾಗಿದ್ದು ಎದ್ದು ಕಾಣುತ್ತಿತ್ತು.
ಇದಲ್ಲದೇ, ಪ್ರಕಾಶ ಹುಕ್ಕೇರಿಯರು ಮಾಧ್ಯಮವರ ಮುಂದೆ ಮಾತನಾಡುವಾಗ “ನಾನೇನು ಪುಟ್ಬಾಲ?” ಎಂದು ಹೇಳಿದ್ದು ಇದೆ. ಈ ಎಲ್ಲ ಅಂಶಗಳಿಂದ ಇಬ್ಬರ ಮದ್ಯ ಕೋಲ್ಡ ಇರೋದು ನಿಜ ಎಂದು ಅರ್ಥೈಸಬಹುದು. ಒಂದೆಡೆ ಪ್ರಕಾಶ ಹುಕ್ಕೇರಿಯವರು ಚಿಕ್ಕೋಡಿಯಲ್ಲಿ ಕುರುಬ ಸಮಾಜದವರಿಗೆ ಕೈ ಟಿಕೇಟ್ ನೀಡಬೇಕು ಎಂದು ಕೂಡ ಮಾಧ್ಯಮದವರ ಮುಂದೆ ತಮ್ಮ ಬೇಡಿಕೆ ಇಟ್ಟಿದರು.
ಆದರೆ, ಈಗ ಸಚಿವ ಸತೀಶ ಜಾರಕಿಹೊಳಿಯವರ ಪುತ್ರಿಗೆ ಟಿಕೇಟ್ ಸಿಗುತ್ತದೆ ಎಂದು ನಿಖರವಾಗಿರುವ ಕಾರಣ ಹುಕ್ಕೇರಿ ಕುಟುಂಬದವರು, ಚುನಾವಣೆಯಿಂದ ದೂರವಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಸಚಿವ ಜಾರಕಿಹೊಳಿ ಹಾಗೂ ಪ್ರಕಾಶ ಹುಕ್ಕೇರಿ ಮದ್ಯ ಕೋಲ್ಡ್ ವಾರ್ ಇರೋದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಹೀಗಾಗಿ ಇದು ಈ ಲೋಕ ಸಮರದಲ್ಲಿ ಯಾವ ಪರಿಣಾಮ ನೀಡಬಹುದು ಎನ್ನೋದು ಕುತೂಹಲಕ್ಕೆ ಕಾರಣವಾಗಿದೆ.


