ಕೊಡಗು : ಮೈಸೂರು ಲೋಕಸಭಾ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಕೊಡಗು ಜಿಲ್ಲೆಗೆ ಆಗಮಿಸಿದ್ದಾರೆ. ಅಭ್ಯರ್ಥಿ ಘೋಷಣೆ ನಂತರ ಮೊದಲ ಬಾರಿಗೆ ಯದುವೀರ್ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗಡಿಭಾಗದಲ್ಲಿ ಕಾವೇರಿ ಮಾತೆಯ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದರು. ಕೊಡಗಿನ ಸಂಪ್ರದಾಯಕ ಓಲಗ ವಾದ್ಯದ ಮೂಲಕ ಹಾಗೂ ಓಬಿಸಿ ಘಟಕದ ರಾಜ್ಯಾಧ್ಯಕ್ಷರಿಂದ ಪುಷ್ಪಗುಚ್ಚ ನೀಡಿ ಸಭಾಕಾರ್ಯಕ್ಕೆ ಸ್ವಾಗತಿಸಿದ್ದಾರೆ.
ಹಿಂದಿನಿಂದಲೂ ಕೊಡಗಿನೊಂದಿಗೆ ನನಗೆ ಒಳ್ಳೆಯ ಸಂಬಂಧವಿದೆ. ನಾನು ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ಮೊದಲನೇ ಭೇಟಿಯಲ್ಲೇ ನನಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕೊಡಗಿನೊಂದಿಗೆ ಒಳ್ಳೆಯ ಭಾವನಾತ್ಮಕ ಸಂಬಂಧವಿದೆ.
ನಿನ್ನೆಯಿಂದಲೇ ಚುನಾವಣಾ ಪ್ರಚಾರ ಕಾರ್ಯ ಶುರು ಮಾಡಿದ್ದೇನೆ. ಕೊಡಗಿನಲ್ಲಿ ಇಂದು ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಕಳೆದ ಒಂಭತ್ತು ವರ್ಷಗಳಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಕೊಂಡಿದ್ದೆ. ಆದರೆ ಕಳೆದ ಒಂದು ವರ್ಷದಿಂದ ನಾನು ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದೆ, ಸಮಾಜದಲ್ಲಿ ಬದಲಾವಣೆ ತರಬೇಕೆಂದರೆ ಅದು ರಾಜಕೀಯ ನೀತಿ ನಿಯಮಗಳನ್ನು ಜಾರಿ ಮಾಡುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಯದುವೀರ್ ರೊಂದಿಗೆ ಮಾಜಿ ಉಪ ಮುಖ್ಯ ಮಂತ್ರಿ ಡಾ. ಅಶ್ವಥ್ ನಾರಾಯಣ್, ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್ , ರವಿ ಕಾಳಪ್ಪ, ಸುಜಾಕುಶಾಲಪ್ಪ, ಸುನಿಲ್ ಸುಬ್ರಮಣಿ, ರಾಬಿನ್ ದೇವಯ್ಯ ಕೂಡ ಓ.ಬಿ.ಸಿ ಸಮಾವೇಶದಲ್ಲಿ ಭಾಗಿಯಾಗಿದ್ದರು.