ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಬೆಂಗಳೂರು ಜನರಿಗೆ ನೀರಿನ ದಾಹ ನೀಗಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಈಗಾಗಲೇ ಖಾಸಗಿ ಬೋರ್ ವೆಲ್, ಹಾಗೂ ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗಿರೋ ಸರ್ಕಾರ, ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಪೂರೈಕೆ ಮಾಡೋದಕ್ಕೆ ತಲೆಕೆಡಿಸಿಕೊಂಡಿದೆ. ನಗರದಲ್ಲಿ ನೀರಿಗೆ ಅಭಾವ ಇದ್ರೂ ಜನರ ನಿರ್ಲಕ್ಷ್ಯ ಮುಂದುವರೆದಿದೆ.
ಕುಡಿಯಲು ನೀರಿಗೆ ಸಮಸ್ಯೆ ಇದ್ರೂ ಕುಡಿಯುವ ನೀರನ್ನ ಕಟ್ಟಡಗಳ ನಿರ್ಮಾಣಕ್ಕೆ ಬಳಕೆ ಮಾಡುವ ಜನರಿಗೆ ಶಾಕ್ ನೀಡಲು ಬೆಂಗಳೂರು ಜಲಮಂಡಳಿ ಮುಂದಾಗಿದೆ. ನಗರದಲ್ಲಿ ಬೇಸಿಗೆ ನಡುವೆಯೂ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಿರ್ಮಾಣ ಕಾಮಗಾರಿ ವೇಳೆ ಕಾವೇರಿ ನೀರು, ಬೋರ್ ವೆಲ್ ನೀರನ್ನ ಬಳಕೆ ಮಾಡದೆ ತಾಜ್ಯ ಸಂಸ್ಕರಣೆ ನೀರು ಬಳಸುವಂತೆ ಜಲಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ಒಂದು ವೇಳೆ ಕಟ್ಟಡ ನಿರ್ಮಾಣಕ್ಕೆ ಬೋರ್ ವೆಲ್ ನೀರು, ಕಾವೇರಿ ನೀರು ಬಳಕೆ ಮಾಡಿದ್ರೆ ಕಟ್ಟಡ ನಿರಾಕ್ಷೇಕ್ಷಣಾ ಪತ್ರ ಹಾ್ಗೂ ಕಟ್ಟದ ಪಾಲಿಕೆ ನೀಡಿರೋ ಲೈಸೆನ್ಸ್ ರದ್ದು ಮಾಡೋದಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಆದೇಶಿಸಿದ್ದಾರೆ


