ರಾಂಚಿ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಕೊಟ್ಟಿದ್ದ ಸ್ವೀಟ್ ವಾರ್ನಿಂಗ್ ಧರ್ಮಶಾಲಾ ಟೆಸ್ಟ್​ ಪಂದ್ಯದಲ್ಲಿ ಸರ್ಫರಾಜ್ ಖಾನ್​ರನ್ನು ಅಪಾಯದಿಂದ ಪಾರು ಮಾಡಿದೆ. ಹೇಗೆ ಅಂತೀರಾ.. ಈ ಸ್ಟೋರಿ ನೋಡಿ

ರಾಂಚಿ ಟೆಸ್ಟ್​ ಪಂದ್ಯದ ವೇಳೆ ಯುವ ಆಟಗಾರ ಸರ್ಫರಾಜ್​ ಖಾನ್​ ಮೇಲೆ ಕ್ಯಾಪ್ಟನ್ ರೋಹಿತ್ ಶರ್ಮಾ ಸ್ವಲ್ಪ ಸೀರಿಯಸ್ ಆಗಿದ್ರು. ಹೆಲ್ಮೆಟ್ ಧರಿಸದೇ ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​​ಗೆ ನಿಂತ ಸರ್ಫರಾಜ್​ಗೆ ರೋಹಿತ್ ಶರ್ಮಾ ಕ್ಲಾಸ್ ತೆಗೆದುಕೊಂಡಿದ್ರು. ಏನು ಹೀರೋ ಆಗ್ಬೇಕು ಅಂದ್ಕೊಂಡಿದ್ದೀಯಾ ಎಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ರು. ಅಲ್ಲದೇ, ಶ್ರೀಕರ್ ಭರತ್ ಮೂಲಕ ಹೆಲ್ಮೆಟ್​ ತರಿಸಿ ಸರ್ಫರಾಜ್​ಗೆ ಕೊಟ್ಟಿದ್ರು.

ರಾಂಚಿ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ ಕೊಟ್ಟಿದ್ದ ಸ್ವೀಟ್ ವಾರ್ನಿಂಗ್ ಧರ್ಮಶಾಲಾ ಟೆಸ್ಟ್​ ಪಂದ್ಯದಲ್ಲಿ ಸರ್ಫರಾಜ್ ಖಾನ್​ರನ್ನು ಅಪಾಯದಿಂದ ಪಾರು ಮಾಡಿದೆ.

ನಡೆದಿದ್ದೇನು?

ಧರ್ಮಶಾಲಾ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನ 38ನೇ ಓವರ್​ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ ವೇಳೆ ಸರ್ಫರಾಜ್ ಖಾನ್ ಶಾರ್ಟ್ ಲೆಗ್ ಪೊಸಿಷನ್​ನಲ್ಲಿ ಫೀಲ್ಡಿಂಗ್ ಮಾಡಿದ್ರು.

ಆ ಓವರ್​ನ ಮೂರನೇ ಎಸೆತವನ್ನು ಬ್ಯಾಟರ್ ಶೊಯೇಬ್ ಬಷೀರ್ ಲೆಗ್​ ಸೈಡ್ ಕಡೆ ಬಲವಾಗಿ ಫ್ಲಿಕ್ ಮಾಡಿದರು. ಚೆಂಡು ನೇರವಾಗಿ ಸರ್ಫರಾಜ್ ಹೆಲ್ಮೆಟ್​ಗೆ ಬಲವಾಗಿ ಬಂದು ಹೊಡೆಯಿತು.

ಹೆಲ್ಮೆಟ್ ಇದ್ದ ಕಾರಣ ಸರ್ಫರಾಜ್​ ಅಪಾಯದಿಂದ ಪಾರಾದರು..ಒಂದೊಮ್ಮೆ ಹೆಲ್ಮೆಟ್ ಇಲ್ಲ ಎಂದಿದ್ರೆ ಸರ್ಫರಾಜ್​ಗೆ ತೀವ್ರ ಸ್ವರೂಪದ ಗಾಯ ಆಗ್ತಿತ್ತು.

ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ರೋಹಿತ್ ಶರ್ಮಾ ಸ್ವೀಟ್ ವಾರ್ನಿಂಗ್ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ

https://freedomtvlive.com/2024/02/25/ind-vs-eng-fourth-test-videos-goes-viral/

By admin

Leave a Reply

Your email address will not be published. Required fields are marked *

Verified by MonsterInsights