ದೆಹಲಿ : ಬೇರು ಮಟ್ಟದಲ್ಲಿನ ಕ್ರೀಡಾಪಟುಗಳನ್ನು ಗುರುತಿಸುವ ಉದ್ದೇಶದಿಂದ ಖೇಲೋ ಇಂಡಿಯಾ ಗೇಮ್ಸ್ ಅನ್ನು ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರ 2018 ರಲ್ಲಿ ಇದನ್ನು ಪ್ರಾರಂಭಿಸಿತು. ಈ ಕ್ರೀಡಾ ಕೂಟದ ಮೂಲಕ ಹಲವು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುವಂತೆ ಮಾಡಿದೆ ಎಂದು ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯರೂ ಹಾಗೂ ಈ ಅಭಿಯಾನದ ರಾಷ್ಟ್ರೀಯ ಸಂಚಾಲಕರಾದ ಶ್ರೀಮತಿ ಶಾಂತಲಾ ಭಟ್ ರವರು ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮಹಿಳಾ ಮೋರ್ಚಾದ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಕ್ರೀಡಾ ಪಟುಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ, ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೇರು ಹಂತದಲ್ಲೇ ಯುವ ಕ್ರೀಡಾಪಟುಗಳನ್ನು ಬೆಳೆಸಲು ಹಾಗೂ ಆ ಮೂಲಕ ಬದುಕುಕಟ್ಟಿಕೊಳ್ಳಲು ನೆರವಾಗಲಿದೆ.
ಕೀಡ್ರಾಪಟುಗಳ ಸಂಪರ್ಕ ಮತ್ತು ಸನ್ಮಾನ ಅಭಿಯಾನವನ್ನು ರಾಜ್ಯಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮಹಿಳಾ ಮೋರ್ಚಾದ ವತಿಯಿಂದ ರಾಜ್ಯ ಕಛೇರಿ ಜಗನ್ನಾಥಭವನದಲ್ಲಿ ಛಾಲನೆಗೊಳಿಸಲಾಯಿತು.
ಈ ಕಾರ್ಯಕ್ರಮವು ದೇಶದಾದ್ಯಂತ ಆರಂಭವಾಗಿದ್ದು, ರಾಜ್ಯದಲ್ಲಿ ಇಂದು ಚಾಲನೆ ಗೊಂಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಕ್ರೀಡಾಪಟುಗಳನ್ನು ಸಂಪರ್ಕಿಸಿ ಸನ್ಮಾನಿಸುವ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಅಂತರರಾಷ್ಟ್ರೀಯಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಾಜ್ಯದ 10 ಮಹಿಳಾ ಕ್ರೀಡಾಪಟುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಎಂ.ಎಲ್.ಸಿ ಗಳೂ ಹಾಗೂ ಮಾಜಿ ಮಹಿಳಾ ಮೋರ್ಚಾ ಅಧ್ಯಕ್ಷರೂ ಆದ ಭಾರತೀ ಶೆಟ್ಟಿ ಅವರು ಮಾತನಾಡಿ ಮೋದೀಜಿಯವರು ವ್ಯಕ್ತಿ ಅಲ್ಲ, ಈ ದೇಶದ ಶಕ್ತಿ ನಾವು ಯಾರೂ ಮಾಡಲಾಗದಂತಹ ಉತ್ತಮ ಕೆಲಸಗಳನ್ನು ನಾವೆಲ್ಲರೂ ಒಂದೇ ಪರಿವಾರ ಎನ್ನುವ ರೀತಿಯಲ್ಲಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ ಎಂದರು.
ಮಹಿಳಾ ಮೊರ್ಚಾದ ರಾಜ್ಯಾಧ್ಯಕ್ಷರಾದ ಸಿ. ಮಂಜುಳಾ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಹಿಳೆಯರಿಗೆ ಸಂಸಾರದಲ್ಲಿ ತಮ್ಮದೇ ಆದ ಜವಾಬ್ದಾರಿ ಗಳು ಇರುತ್ತವೆ. ಅದರೂ ಮನೆಯಿಂದ ಹೊರಗೆ ಬಂದು ದಿನ ನಿತ್ಯ ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಸಾಧನೆಗಳನ್ನು ಮಾಡಿ, ಪದಕಗಳನ್ನು ಪಡೆದಿರುವುದು ಸಾಮಾನ್ಯ ವಿಷಯ ಅಲ್ಲ. ಇದು ಮಹಿಳೆಯರೆಲ್ಲರಿಗೂ ಹೆಮ್ಮೆಯ ವಿಷಯ. ಇವರೆಲ್ಲಾ ನಮಗೆ ಸ್ಪೂರ್ತಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದವರು ಇದು ಒಂದು ಅಭೂತಪೂರ್ವ ಕಾರ್ಯಕ್ರಮ, ನಮಗೆ ತುಂಬಾ ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸರಕಾರದ ಸಹಕಾರದಿಂದ ಇನ್ನೂ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು. ಕ್ರೀಡಾಪಟುಗಳ ಸಂಪರ್ಕ ಅಭಿಯಾನದ ರಾಜ್ಯ ಸಂಚಾಲಕರಾದ ಶ್ರೀಮತಿ ಕಾಂತೀ ಶೆಟ್ಟಿಯವರು ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪೂರ್ಣಿಮಾ ಪ್ರಕಾಶ್, ಶ್ರೀಮತಿ ಲಕ್ಷ್ಮೀ ಅಶ್ವಿನ್ ಗೌಡ, ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಆಶಾ ರಾವ್ ಮತ್ತು ರೇಖಾ ಗೋವಿಂದ, ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಿಶೇಷವಾಗಿ ಅತ್ಯಂತ ಹಿರಿಯ ಕ್ರೀಡಾ ವ್ಯಕ್ತಿಗಳಾದ
ಮುಕ್ತ ಉದಯರಾಜ್ ಶೆಟ್ಟಿಯಾದ 72 ವರುಷದ ಇವರು 2003 ರಿಂದ ಮಾಸ್ಟರ್ಸ್ ಅಥ್ಲೇಟಿಕ್ಸ್ನಲ್ಲಿ ಭಾಗವಹಿಸಿ 6 ಬಾರಿ ಅಂತ ರಾಷ್ಟ್ರೀಯ 16 ಬಾರಿ ರಾಷ್ಟ್ರೀಯ 17 ಭಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.
ಲಲಿತಮ್ಮ( 80+ ವಯಸ್ಸು)̧ ಉಮಾ ಅನಂತಮೂರ್ತಿ (80+ ವಯ ̧) ಮುಕ್ತ ಉದಯರಾಜ್ ಶೆಟ್ಟಿ ( 70+ ವಯಸ್ಸು ಡಾ.ಲತಾ ರವಿಚಂದ್ರನ್ ( 60+ ವಯಸ್ಸು )̧ ಶ್ಯಾಮಲಾ ಮನಮೋಹನ್ (60+ ವಯಸ್ಸು)̧ ವಾರಿಜಾಕ್ಷಿ ಮನೋಹರ್ 55+ ವಯಸ್ಸು ಭಾರತಿ (60+ ವಯಸ್ಸು)̧ ಸುಶೀಲ ( 65+ ವಯಸ್ಸು)̧ ತರಬೇತುದಾರ: ಬೆನ್ನಿ ಥಾಮಸ್ ಒಳಗೊಂಡು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರು, ಕ್ರೀಡಾಪಡಟುಗಳನ್ನು ಸನ್ಮಾನಿಸಲಾಗಿದೆ.


