Top Newsಸುದ್ದಿ

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗ್ರೀನ್​ ಸಿಗ್ನಲ್​

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಮೊದಲ ತಿಂಗಳೇ ಬಂಪರ್‌ ನ್ಯೂಸ್ ಸಿಕ್ಕಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿಸುದ್ದಿಯನ್ನು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8 ನೇ ವೇತನ ಆಯೋಗವನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಆಯೋಗಕ್ಕೆ ಶೀಘ್ರದಲ್ಲೇ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಪ್ರತಿ 10 ವರ್ಷಕ್ಕೊಮ್ಮೆ ತನ್ನ ಉದ್ಯೋಗಿಗಳ ವೇತನವನ್ನು ಪರಿಷ್ಕರಿಸಲು ವೇತನ ಆಯೋಗವನ್ನು ರಚಿಸುತ್ತದೆ. ವೇತನ ಪರಿಷ್ಕರಿಸುವುದರ ಜೊತೆಗೆ, ಪ್ರತಿ ವೇತನ ಆಯೋಗವು ಒಂದು ಉಲ್ಲೇಖ ಅವಧಿಯನ್ನು ಹೊಂದಿದೆ. ವೇತನ ಆಯೋಗಗಳು ಪಿಂಚಣಿ ಪಾವತಿಗಳನ್ನು ಸಹ ನಿರ್ಧರಿಸುತ್ತವೆ.

7ನೇ ವೇತನ ಆಯೋಗವನ್ನು 2016 ರಲ್ಲಿ ರಚಿಸಲಾಗಿತ್ತು. ಅದರ ಅವಧಿ 2026 ರಲ್ಲಿ ಕೊನೆಗೊಳ್ಳಲಿದೆ.

Comments (0)

Your email address will not be published. Required fields are marked *

Back to top button