ಬೀದರ್: ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ದುರಂತ ಅಂತ್ಯ ಕಂಡಿರುವ ಘಟನೆ ಬೀದರ್‌ನ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ನಡೆದಿದೆ.
ಗಡಿಕುಶನೂರು ಗ್ರಾಮದ ರುತ್ವಿ (8) ಸಾವನ್ನಪ್ಪಿದ ಬಾಲಕಿ.ಬೀದರ್ ತಾಲೂಕಿನ ಜನಾವಾಡಾ ಗ್ರಾಮದ ಗುರುನಾನಕ್ ಶಾಲೆಯಲ್ಲಿ ಬಾಲಕಿ ಓದುತ್ತಿದ್ದು ಶಾಲೆಯಿಂದ ವಾಪಸ್ ಮನೆಗೆ ಬರುವಾಗ ಸಾವನ್ನಪ್ಪಿದ್ದಾಳೆ. ಗುರುನಾನಕ್ ಶಾಲೆಯಿಂದ ಮನೆಗೆವರೆಗೂ ಡ್ರಾಪ್ ಮಾಡಿದ್ದ ಶಾಲಾ ವಾಹನ ಬಾಲಕಿ ಸ್ಕೂಲ್ ಬಸ್ ಇಳಿದು ಬಸ್ ಪಕ್ಕವೇ ನಿಂತಿದ್ದಳು.
ಬಾಲಕಿ ಬಸ್ ಬಳಿಯಿರುವುದನ್ನ ಗಮನಿಸದೆ ಚಾಲಕ ಬಸ್ ಓಡಿಸಿದ್ದಾನೆ ಈ ವೇಳೆ ಬಸ್‌ಗೆ ಸಿಲುಕಿ ಇನ್ನೂ ಬಾಳಿ ಬದುಕಬೇಕಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನ ಸುದ್ದಿ ತಿಳಿದು ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಜನವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


