ದೇಶಾದ್ಯಾಂತ 76ನೇ ಗಣರಾಜ್ಯೋತ್ಸವ ಸಂಭ್ರಮ..

ದೇಶಾದ್ಯಾಂತ 76ನೇ ಗಣರಾಜ್ಯೋತ್ಸವ ಸಂಭ್ರಮ ಇಂದು ರಾಷ್ಟ್ರದ ಕರ್ತವ್ಯ ಪಥದಲ್ಲಿ ಭವ್ಯವಾದ ಮೆರವಣಿಗೆಯೊಂದಿಗೆ ಮಿಲಿಟರಿ ಸಾಮರ್ಥ್ಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಗಿದೆ. ಸಂವಿಧಾನವನ್ನು ಅಂಗೀಕರಿಸಿದ ಹಾಗೂ ಭಾರತ ಗಣತಂತ್ರ ರಾಷ್ಟ್ರವಾಗಿ ಬದಲಾದ ಗೌರವಾರ್ಥ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಸುವರ್ಣ ಭಾರತ ಪರಂಪರೆ ಮತ್ತು ಪ್ರಗತಿ ಎನ್ನುವುದು 2025ನೇ ಸಾಲಿನ ಗಣರಾಜ್ಯೋತ್ಸವದ ಥೀಮ್ ಆಗಿದೆ.
ರಾಷ್ಟ್ರಪತಿಗಳಿಂದ ಧ್ವಜಾರೋಹಣ ನೆರವೇರುತ್ತದೆ. ಸುವರ್ಣ ಭಾರತದ ನಿರ್ಮಾಣಕ್ಕೆ ಕಾರಣವಾದವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸುತ್ತಾರೆ.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ನ್ನು ಈ ಜಂಟಿ ಸ್ತಬ್ಧಚಿತ್ರ ಒಳಗೊಂಡಿರಲಿದೆ. ಜಂಟಿ ಆಪರೇಷನ್ ಕೊಠಡಿ, ಅರ್ಜುನ್ ಟ್ಯಾಂಕರ್ ಮತ್ತು ತೇಜಸ್, ಐಎನ್‌ಎಸ್ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿರಲಿದೆ.
ಈ ವರ್ಷದ ಥೀಮ್
‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’




