2024 ರಲ್ಲಿ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು ಒಟ್ಟು 75 ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ. ಹತರಾದ ಉಗ್ರರ ಪೈಕಿ ಶೇ.60ರಷ್ಟು ಮಂದಿ ಪಾಕಿಸ್ತಾನದವರು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರರ್ಥ ಭಾರತೀಯ ಭದ್ರತಾ ಪಡೆಗಳು ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡುತ್ತಿವೆ. ಇದುವರೆಗೆ ಕೊಲ್ಲಲ್ಪಟ್ಟ 75 ಮಂದಿಯಲ್ಲಿ ಹೆಚ್ಚಿನವರು ವಿದೇಶಿ ಭಯೋತ್ಪಾದಕರು.
ಇವುಗಳಲ್ಲಿ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ ನುಸುಳಲು ಪ್ರಯತ್ನಿಸುತ್ತಿದ್ದಾಗ ಹತರಾದ 17 ಭಯೋತ್ಪಾದಕರು ಮತ್ತು ಆಂತರಿಕ ಪ್ರದೇಶಗಳಲ್ಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ 26 ಭಯೋತ್ಪಾದಕರು ಸೇರಿದ್ದಾರೆ. ಹೆಚ್ಚುತ್ತಿರುವ ಭಯೋತ್ಪಾದಕ ಬೆದರಿಕೆಯನ್ನು ನಿಗ್ರಹಿಸುವಲ್ಲಿ ಭದ್ರತಾ ಪಡೆಗಳ ಕ್ರಮಗಳು ಮಹತ್ವದ ಹೆಜ್ಜೆಯಾಗಿದೆ.
2024 ರಲ್ಲಿ, ಜಮ್ಮು ಮತ್ತು ಕಾಶ್ಮೀರದಾದ್ಯಂತ 60 ಭಯೋತ್ಪಾದಕ ಘಟನೆಗಳಲ್ಲಿ 32 ನಾಗರಿಕರು ಮತ್ತು 26 ಭದ್ರತಾ ಪಡೆಗಳ ಸಿಬ್ಬಂದಿ ಸೇರಿದಂತೆ ಒಟ್ಟು 122 ಜನರು ಸಾವನ್ನಪ್ಪಿದ್ದಾರೆ.