Thursday, November 20, 2025
19.9 C
Bengaluru
Google search engine
LIVE
ಮನೆರಾಜ್ಯನ. 1 ರಿಂದ ಯೆಲ್ಲೋ ಲೈನ್‌ನಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭ

ನ. 1 ರಿಂದ ಯೆಲ್ಲೋ ಲೈನ್‌ನಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭ

ಬೆಂಗಳೂರು: ಬಿಎಂಆರ್​ಸಿಎಲ್​ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್ ಕೊಟ್ಟಿದೆ. ನವೆಂಬರ್ 1 ರಿಂದ ಯೆಲ್ಲೋ ಲೈನ್‌ನಲ್ಲಿ 5ನೇ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ.

ನಾಳೆ ಬೆಳಿಗ್ಗೆ 5 ಗಂಟೆಗೆ 5ನೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ BMRCL ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈ ಕುರಿತಾಗಿ ಬಿಎಂಆರ್​​ಸಿಎಲ್​ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು, ನವೆಂಬರ್​ 1ರಿಂದ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲನ್ನು ವಾಣಿಜ್ಯ ಸೇವೆಗೆ ಒಳಪಡಿಸುತ್ತಿದೆ ಈ ಹೊಸ ರೈಲಿನ ಚಾಲನೆಯಿಂದ, ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ರೈಲುಗಳ ಆವರ್ತನವು ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುತ್ತವೆ. ಇದರಿಂದ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಲಿದೆ. ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ.

ಯೆಲ್ಲೋ ಲೈನ್ ಮೆಟ್ರೋಗಳಲ್ಲಿ ಪ್ರಯಾಣಿಸುವವರು ಟ್ರೈನ್​ಗಳಿಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ. 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಆ‌ರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್​ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗದಲ್ಲಿ ಕೊನೆಯ ರೈಲು ರಾತ್ರಿ 11 ಗಂಟೆಗೆ ಸಂಚಾರ ಮಾಡಲಿದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ. ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್​​ಸಿಎಲ್​​ವಿನಂತಿಸಿದೆ. ಇನ್ನು ಬೆಂಗಳೂರು ಟ್ರಾಫಿಕ್ ಜಾಮ್​ನಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಬೆಸ್ಟ್ ಅಂತಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments