Friday, September 12, 2025
27.7 C
Bengaluru
Google search engine
LIVE
ಮನೆ#Exclusive Newsಹಿಮಾಚಲದ ಕುಲುವಿನಲ್ಲಿ ಸಿಲುಕಿದ್ದ 5,000 ಪ್ರವಾಸಿಗರನ್ನು ಭಾರೀ ಹಿಮಪಾತದ ನಡುವೆ ರಕ್ಷಿಸಲಾಗಿದೆ

ಹಿಮಾಚಲದ ಕುಲುವಿನಲ್ಲಿ ಸಿಲುಕಿದ್ದ 5,000 ಪ್ರವಾಸಿಗರನ್ನು ಭಾರೀ ಹಿಮಪಾತದ ನಡುವೆ ರಕ್ಷಿಸಲಾಗಿದೆ

ಡೆಹ್ರಾಡೂನ್ : ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಶುಕ್ರವಾರ ಹಿಮಾಚಲ ಪ್ರದೇಶದ ಕುಲುವಿನ ಸ್ಕೀ ರೆಸಾರ್ಟ್ ಸೊಲಾಂಗ್ ನಾಲಾದಲ್ಲಿ ಸಿಲುಕಿದ್ದ ಸುಮಾರು 5,000 ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ್ದಾರೆ.

ಸೋಲಾಂಗ್ ನಾಲಾದಲ್ಲಿ ಸುಮಾರು 1,000 ವಾಹನಗಳು ಸಿಲುಕಿಕೊಂಡಿದ್ದವು. ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಕುಲು ಪೊಲೀಸರು ತಿಳಿಸಿದ್ದಾರೆ.ಭಾರೀ ಹಿಮಪಾತದಿಂದಾಗಿ ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲು ಪೊಲೀಸರು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದಿದ್ದಾರೆ. ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಕುಲು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.
ಭಾರೀ ಹಿಮಪಾತ ಮತ್ತು ಶೀತ ಅಲೆಗಳು ಹಿಮಾಚಲ ಪ್ರದೇಶವನ್ನು ಮತ್ತಷ್ಟು ಕಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ. ಹಿಮಾಚಲ ಪ್ರದೇಶವು ಲಾಹೌಲ್-ಸ್ಪಿತಿ, ಚಂಬಾ, ಕಂಗ್ರಾ, ಕುಲು, ಶಿಮ್ಲಾ ಮತ್ತು ಕಿನ್ನೌರ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಸಾಕ್ಷಿಯಾಗಿದೆ.ಡಿ.29 ರಿಂದ ಬಿಲಾಸ್ಪುರ್, ಹಮೀರ್ಪುರ್ ಮತ್ತು ಉನಾ ಜಿಲ್ಲೆಗಳನ್ನು ಒಳಗೊಂಡಂತೆ ಬಯಲು ಪ್ರದೇಶಗಳ ಮೇಲೆ ಚಳಿಗಾಳಿಯು ಪರಿಣಾಮ ಬೀರುವ ನಿರೀಕ್ಷೆಯಿದೆ. ಮಂಡಿ, ಕುಲು ಮತ್ತು ಚಂಬಾ ಸೇರಿದಂತೆ ಈ ಪ್ರದೇಶಗಳಲ್ಲಿ ಜ.1 ರವರೆಗೆ ತೀವ್ರ ಚಳಿ ಇರಲಿದೆ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments