Freedom TV

5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ….

ಕುನೋ ರಾಷ್ರೀಯ ಪಾರ್ಕನಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಪ್ರಾಜೆಕ್ಟ್​ ಚೀತಾ ಯೋಜನೆ ಸಕ್ಸಸ್​ ಆಗುವ ಲಕ್ಷಣಗಳು ಗೋಚರಿಸಿವೆ. ದಕ್ಷಿಣಾ ಆಫ್ರಿಕಾದಿಂದ ತಂದಿದ್ದ ಗಾಮಿನಿ ಹೆಸರಿನ ಚೀತಾ ಮುದ್ದಾದ ಐದು ಮರಿಗಳಿಗೆ ಜನ್ಮ ನೀಡಿದೆ. ಇದರಿಂದಾಗಿ ಈಗ ಚೀತಾ ಸಂತತಿ 26ಕ್ಕೆ ಏರಿಕೆಯಾದಂತಾಗಿದೆ. ಪ್ರಾಜೆಕ್ಟ್​ ಚೀತಾದಡಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿರುವ ಚೀತಾಗಳು ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಆರಂಭದಲ್ಲಿಯೇ ಬೇಸರದ ಸುದ್ದಿಗಳಿಂದಲೇ ನಿರಾಸೆಗೊಂಡಿದ್ದ ಪ್ರಾಣಿಪ್ರೀಯರಿಗೆ ಇದೀಗ ಡಬಲ್ ಸಂಭ್ರಮ ಮನೆ ಮಾಡಿದೆ. ಪರಿಸರ ಸಚಿವ ಭೂಪೇಂದ್ರ ಯಾದವ ಮರಿಗಳು ಮತ್ತು ತಾಯಿ ಚಿರತೆಯ ವಿಡಿಯೋ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶ ಕುನೋ ಅಭಯಾರಣ್ಯದಲ್ಲಿ ಬಿಡಲಾಗಿದ್ದ ಚಿರತೆಗಳ ಪೈಕಿ ಹಲವು ಮೃತಪಟ್ಟಿದ್ದವು. ಚಿರತೆಗಳ ತಳಿಯನ್ನು ಮತ್ತೆ ಬೆಳೆಸುವ ಮೋದಿ ಅವರ ಕನಸಿನ ಯೋಜನೆ ಹಳ್ಳ ಹಿಡಿಯಿತು ಎಂಬ ಟೀಕೆಗಳ ಮಧ್ಯೆ ಈ ಆಶಾದಾಯಕ ಬೆಳವಣಿಗೆ ನಡೆದಿದೆ.

Comments (0)

Your email address will not be published. Required fields are marked *

Back to top button