ಗೃಹ ಲಕ್ಷ್ಮಿ ಯೋಜನೆಯಿಂದ ಏನಾಗುತ್ತೆ ಎಂದು ಪ್ರಶ್ನೆ ಕೇಳೋರಿಗೆ ಕಾಂಗ್ರೆಸ್ ಎಂಎಲ್ಎ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ. ಬಡವರಿಗೆ ಪ್ರತಿವರ್ಷ 24,000 ಕೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆ ಬರುತ್ತೆ ಎಂದು ಕಾಂಗ್ರೆಸ್ ಶಾಸಕ ಹೇಳಿದ್ದಾರೆ.ವಿಧಾನ ಸೌಧದಲ್ಲಿ ಬಜೆಟ್ ಕುರಿತು ಚರ್ಚೆ ನಡೆಯುತ್ತಿದೆ.ಈ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್, ಗ್ಯಾರಂಟಿ ಯೋಜನೆಗಳ ಕುರಿತು ಬ್ಯಾಟಿಂಗ್ ಬೀಸಿದ್ದಾರೆ. ಗೃಹಲಕ್ಷ್ಮಿ ಟೀಕಿಸಿದ್ದ ಬಿಜೆಪಿ ಸದಸ್ಯರ ವಿರುದ್ಧ ಶಾಸಕ ರಂಗನಾಥ್ ವಾಗ್ದಾಳಿ ನಡೆಸಿದ್ದಾರೆ.ಶಾಸಕ ರಂಗನಾಥ್ 2 ರಿಂದ 4 ಸಾವಿರ ಗೃಹಲಕ್ಷ್ಮಿ ಹಣ ಘೋಷಣೆ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಕುರಿತು ವಿಧಾನ ಸಭೆಯಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಗೃಹ ಲಕ್ಷ್ಮಿ ಯೋಜನೆಯಿಂದ ಏನಾಗುತ್ತೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಬಡವರಿಗೆ ಪ್ರತಿವರ್ಷ 24,000 ಕೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆ ಬರುತ್ತೆ, ಗೃಹ ಲಕ್ಷ್ಮಿ ಯೋಜನೆಗೆ ವಿರೋಧಿಸಿದರೆ ಜನರ ಶಾಪ ತಟ್ಟುತ್ತೆ. ಮುಂದೆ ಸರ್ಕಾರ ಬದಲಾವಣೆ ಆದರೂ ಗ್ಯಾರಂಟಿ ಯೋಜನೆ ನಿಲ್ಲಿಸುವುದು ಅಸಾಧ್ಯ. 2028 ರಲ್ಲಿ ನಮ್ಮ ಸರ್ಕಾರ ಬಂದರೆ ಗೃಹಲಕ್ಷ್ಮೀ ಹಣವನ್ನ 2000 ದಿಂದ 4000 ಕ್ಕೆ ಏರಿಕೆ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.