ಜಿಲ್ಲೆ
ಹಾವೇರಿ ಜಿಲ್ಲಾ ಹಾಲು ಒಕ್ಕೂಟದಿಂದ ಹಾಲಿನ ದರ 3.50ರೂ ಇಳಿಕೆ

ಹಾವೇರಿ: ರಾಜ್ಯ ಸರ್ಕಾರ ಇತ್ತಿಚಿಗೆ ಬಸ್, ಮೆಟ್ರೋ, ವಿದ್ಯುತ್ ದರ ಏರಿಕೆ ಅಷ್ಟೇ ಅಲ್ಲದೇ ಹಾಲಿನ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ, ಹಾವೇರಿ ಜಿಲ್ಲಾ ಒಕ್ಕೂಟ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಪ್ರತಿ ಲೀಟರ್ ಹಾಲಿನ 3.50 ರೂ ಇಳಿಕೆ ಮಾಡಿದೆ.
ಮಾರ್ಚ್ 28 ರಿಂದ ಆದೇಶವನ್ನ ಜಾರಿಗೆ ಮಾಡಿದೆ. ಏಪ್ರೀಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲು ಕೆಎಂಎಫ್ ನಿರ್ಧಾರ ಮಾಡಿದೆ. ಆದರೆ ಹಾವೇರಿ ಹಾಲು ಒಕ್ಕೂಟ ಮಾತ್ರ ಲೀಟರ್ ಹಾಲಿಗೆ 3.50 ರೂ.ಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ, ಇದು ರೈತರ ಆಕ್ರೋಶ ಕಾರಣವಾಗಿದೆ
ಎಮ್ಮೆ ಹಾಲಿಗೆ ಲೀಟರ್‌ಗೆ 43 ರೂ. ನೀಡಲಾಗುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡಲಾಗ್ತಿತ್ತು. ಆದರೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಕಾರಣ ನೀಡಿ 3.50 ರೂಪಾಯಿ ಕಟ್ ಮಾಡಿದೆ. ಮಾರ್ಚ್ 27ರಂದೇ ಹಾವೆಮುಲ್ ಆದೇಶ ಮಾಡಿದೆ. ಇದರಿಂದ 43 ರೂ. ಇದ್ದ ಎಮ್ಮೆ ಹಾಲಿನ ದರ 39.50 ರೂ., 30.50 ರೂ. ಇದ್ದ ಹಸುವಿನ ಹಾಲಿನ ದರ 27 ರೂ.ಗಳಿಗೆ ಇಳಿಕೆಯಾಗಿದೆ.




