Thursday, May 1, 2025
28.8 C
Bengaluru
LIVE
ಮನೆ#Exclusive NewsTop Newsಮೋದಿ ಜೊತೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ: ಯಾರಿಗೆ ಸಿಗಲಿದೆ ಅವಕಾಶ?

ಮೋದಿ ಜೊತೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ: ಯಾರಿಗೆ ಸಿಗಲಿದೆ ಅವಕಾಶ?

ನವದೆಹಲಿ: ತೀಸ್ರೀ ಬಾರ್ ಮೋದಿ ಸರ್ಕಾರ್ ಎಂಬ ಬಿಜೆಪಿಯ ನಿನಾದ ಕಡೆಗೂ ನಿಜವಾಗುತ್ತಿದೆ. ಜವಾಹರಲಾಲ್ ನೆಹರು ನಂತರ ಭಾರತದ ಇತಿಹಾಸದಲ್ಲಿ ಎರಡನೇ ವ್ಯಕ್ತಿಯಾಗಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ . ಜೂನ್ 9 ರ ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ.

ಪ್ರಧಾನಿ ಮೋದಿ ಜೊತೆಗೆ ಅವರ ನೂತನ ಸಚಿವ ಸಂಪುಟವೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ, ಚಂದ್ರಬಾಬು ನಾಯ್ಡು ಅವರ ಟಿಡಿಪಿ, ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ನಡುವೆ ನಾಯಕರು ಹಲವು ಪ್ರಮುಖ ಖಾತೆಗಳ ಮೇಲೆ ಕಣ್ಣೀಟ್ಟಿದ್ದು, ದೇಶದಲ್ಲಿ ಮೈತ್ರಿ ಸರ್ಕಾರದ ಶಕೆ ಮತ್ತೆ ಆರಂಭವಾಗಿದೆ.

NDTV ಯ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ‘ಸುಮಾರು 30 ಸಚಿವರು’ ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದ್ದು ಪ್ರಮಾಣವಚನ ಸಮಾರಂಭಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿವೆ. ಪೂರ್ಣ ಪ್ರಮಾಣದ ಮಂತ್ರಿಮಂಡಲದ ಬಲವು 78 ಮತ್ತು 81 ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳಂತಹ ಮಹತ್ವದ ಖಾತೆಗಳನ್ನು ಬಿಜೆಪಿ ಇಟ್ಟುಕೊಳ್ಳಲಿದ್ದು ಉಕ್ಕು, ನಾಗರಿಕ ವಿಮಾನಯಾನ ಮತ್ತು ಕಲ್ಲಿದ್ದಲು ಮುಂತಾದ ಖಾತೆಗಳು ಮಿತ್ರ ಪಕ್ಷಗಳಿಗೆ ಸಿಗುವ ಸಾಧ್ಯತೆಯಿದೆ. ಇಂದು ಬೆಳಗ್ಗೆಯಿಂದ ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರಿಗೆ ಸರ್ಕಾರದಿಂದ ಕರೆಗಳು ಬರುವ ನಿರೀಕ್ಷೆಯಿದೆ.

ಮೈತ್ರಿಯ ಭಾಗವಾಗಿರುವ ವಿವಿಧ ರಾಜಕೀಯ ಪಕ್ಷಗಳಿಂದ ವಿಭಿನ್ನ ಬೇಡಿಕೆಗಳಿದ್ದರೂ, ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ‘ದೊಡ್ಡ ನಾಲ್ಕು’ ಸಚಿವಾಲಯಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಯಲ್ಲಿಯೇ ಇರುತ್ತವೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಎನ್‌ಡಿಟಿವಿ ವರದಿಯ ಪ್ರಕಾರ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಸಂಪುಟದಲ್ಲಿ ನಾಲ್ಕು ಖಾತೆಗಳನ್ನು ಪಡೆಯಲಿದೆ ಮತ್ತು ನಾಯಕರು ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ ಮತ್ತು ದಗ್ಗುಮಲ್ಲ ಪ್ರಸಾದ್ ಆಗಿರಬಹುದು ಎನ್ನಲಾಗಿದೆ.

ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (ಜೆಡಿಯು) ಎರಡು ಸ್ಥಾನಗಳನ್ನು ಪಡೆಯಬಹುದು ಮತ್ತು ನಾಯಕರು ರಾಮ್ ನಾಥ್ ಠಾಕೂರ್ ಮತ್ತು ಲಾಲಾ ಸಿಂಗ್ ಅವಕಾಶ ಸಿಗಬಹುದು ಎನ್ನಲಾಗಿದ್ದು, ಕ್ಯಾಬಿನೆಟ್‌ನ ಆಯ್ಕೆಯಾದವರಿಗೆ ಇಂದು ಬೆಳಿಗ್ಗೆ ಕರೆಗಳು ಬರಬಹುದು ಎಂದು ನಿರೀಕ್ಷೆಯಿದೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments