Top Newsರಾಜ್ಯಸುದ್ದಿ

3 ಎಕರೆ ದಾಳಿಂಬೆ ಬೆಳೆ ಬೆಂಕಿಗಾಹುತಿ; ರೈತನಿಗೆ ಪರಿಹಾರ ನೀಡಲು ರೈತ ಸಂಘ ಆಗ್ರಹ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 3 ಎಕರೆಗೂ ಹೆಚ್ಚು ದಾಳಿಂಬೆ ಬೆಳೆ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಸೈದಪ್ಪ ರಾಮದುರ್ಗ ಎಂಬುವವರಿಗೆ ಸೇರಿದ ತೋಟದಲ್ಲಿ ರವಿವಾರ ಮದ್ಯಾಹ್ನ ಈ ಘಟನೆ ಸಂಭವಿಸಿದೆ. ಈ ಕುರಿತು ಫ್ರೀಡಂ ಟಿವಿಯ ಜೊತೆ ಮಾತನಾಡಿದ ರೈತ ಸೈದಪ್ಪ, ಲಕ್ಷಾನುಗಟ್ಟಲೇ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದೇವು. ಆದ್ರೆ, ಆಕಸ್ಮಿಕ ಬೆಂಕಿಯಿಂದಾಗಿ ದಾಳಿಂಬೆ ಬೆಳೆ ಸಂಪೂರ್ಣಾಗಿ ಸುಟ್ಟು ಹೋಗಿದೆ. ಸಾಕಷ್ಟು ಸಾಲ ಮಾಡಿ ದಾಳಿಂಬೆ ಬೆಳೆದಿದ್ದೆ. ಈ ರೀತಿ ಅನಾಹುತವಾದ್ದರಿಂದ ದಿಕ್ಕುತೋಚದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಫ್ರೀಡಂ ಟಿವಿ ಬಳಿ ರೈತ ಸೈದಪ್ಪ ಅಳಲು ತೋಡಿಕೊಂಡರು.

ಇನ್ನು ಈ ಘಟನೆ ಕುರಿತು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಮಾತನಾಡಿ, 3 ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ. ಇದರಿಂದ ರೈತ ತೀವ್ರ ಕಂಗಾಲಾಗಿದ್ದಾನೆ. ಈ ಘಟನೆ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು. ಆ ಮೂಲಕ ರೈತನಿಗೆ ಪರಿಹಾರ ಕೊಡಿಸಬೇಕು. ಹಾಗೂ ವಡಗೇರಾ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ದಳ ಕಚೇರಿ ಸ್ಥಾಪಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದರು.

Comments (0)

Your email address will not be published. Required fields are marked *

Back to top button