Wednesday, April 30, 2025
24 C
Bengaluru
LIVE
ಮನೆ#Exclusive Newsರಾಜ್ಯದ 2ನೇಯ ಭಾಷೆ ತುಳು ; ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದ 2ನೇಯ ಭಾಷೆ ತುಳು ; ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತುಳು ಭಾಷೆಯನ್ನು ಅಧಿಕೃತ ಮಾಡಲು ಗಂಭೀರ ಪರಿಶೀಲನೆ ಮಾಡಲಾಗುವುದು.

ಕರ್ನಾಟಕದ ಎರಡನೇ ಭಾಷೆಯಾಗಿ ತುಳುವನ್ನು ಪರಿಗಣಿಸಬೇಕು ಎನ್ನುವ ಬೇಡಿಕೆ ಹಳೆಯದು. ಹಲವಾರು ವರ್ಷಗಳಿಂದಲೂ ಈ ಕುರಿತು ಬೇಡಿಕೆಗಳನ್ನು ಸಲ್ಲಿಸುತ್ತಲೇ ಬರಲಾಗುತ್ತಿದೆ. ಕರಾವಳಿ ಭಾಗ ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲಿ ನೆಲೆಸಿರುವ ಈ ಭಾಗದ ಜನ ಮಾತನಾಡುವುದು ತುಳುವನ್ನೇ. ಕನ್ನಡದ ನಂತರ ಹೆಚ್ಚು ಜನ ಮಾತನಾಡುವ ಕರ್ನಾಟಕದ ಮತ್ತೊಂದು ಭಾಷೆ ತುಳು. ಈ ಭಾಷೆಯನ್ನು ಕನ್ನಡದ ಬಳಿಕ ಎರಡನೇ ಭಾಷೆಯಾಗಿ ಪರಿಗಣಿಸಬೇಕು ಎನ್ನುವ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಈ ಬೇಡಿಕೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಕೂಡ ಮಾಡಲಾಗುವುದು ಎನ್ನುವ ಉತ್ತರ ಸರ್ಕಾರದ ಕಡೆಯಿಂದಲೂ ಬಂದಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments