ಗದಗ: 42ರ ಅಂಕಲ್ ಲವ್ ಟಾರ್ಚರ್ ಸಹಿಸಲಾಗದೇ 19 ವರ್ಷದ ಯುವತಿ ಸೂಸೈಡ್ ಮಾಡಿಕೊಂಡಿರುವ ಘಟನೆ ನಗರದ ಬೆಟಗೇರಿ ಬಾಲಕಿಯರ ವೃತ್ತಪರ ಹಾಸ್ಟೇಲ್ನಲ್ಲಿ ನಡೆದಿದೆ.
ಮುಂಡರಗಿ ತಾಲೂಕಿನ ವಿರುಪಾಪೂರ ತಾಂಡಾದ ನಿವಾಸಿ ವಂದನಾ(19) ಪಿನಾಯಿಲ್ ಕುಡಿದು ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿನಿ. ವಂದನಾ ಗದಗದ ಜಿಮ್ಸ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಾಂಗ ಮಾಡುತ್ತಿದ್ದಳು. ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್ನಲ್ಲಿದ್ದುಕೊಂಡೇ ವ್ಯಾಸಂಗ ಮಾಡುತ್ತಿದ್ದಳು.
ಗುರುವಾರ ಹಾಸ್ಟೇಲ್ನಲ್ಲಿ ಪಿನಾಯಿಲ್ ಕುಡಿದಿದ್ದಾಳೆ. ಕೂಡಲೇ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.