Wednesday, April 30, 2025
29.2 C
Bengaluru
LIVE
ಮನೆUncategorized171 ಹಳ್ಳಿಗಳಿಗೆ ಕುಡಿಯುವ ನೀರು. 392 ಕೋಟಿ ಹಣ ಬಿಡುಗಡೆ

171 ಹಳ್ಳಿಗಳಿಗೆ ಕುಡಿಯುವ ನೀರು. 392 ಕೋಟಿ ಹಣ ಬಿಡುಗಡೆ

ಬೆಂಗಳೂರು: ರಾಜ್ಯದ 171 ಹಳ್ಳಿಗಳಿಗೆ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಸುಮಾರು 392 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಲಾಗಿದೆ.ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಈ ಯೋಜನೆಯಲ್ಲಿ 125 ಗ್ರಾಮಗಳ 3.27ಲಕ್ಷಕ್ಕೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.ಆ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆ ಬದ್ಧವಾಗಿದೆ ಎಂದಿದ್ದಾರೆ..

ಯಾವೆಲ್ಲ ಯೋಜನೆಗಳು

* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲದ 26 ಗ್ರಾಮಗಳ 1.60 ಲಕ್ಷ ಜನರಿಗೆ ನೀರಿನ ಸಂಪರ್ಕ. ಇದಕ್ಕೆ ಒಟ್ಟು ಅನುದಾನ 245 ಕೋಟಿ

* ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ ತಾಲ್ಲೂಕಿನ ಅಂತರಸಂತೆಯ 64 ಗ್ರಾಮಗಳ 67,527 ಜನರಿಗೆ ನೀರಿನ ಸಂಪರ್ಕ.ಇದಕ್ಕೆ ಅನುದಾನ 101.73 ಕೋಟಿ

* ಮೈಸೂರು ಜಿಲ್ಲೆಯ ದೊಡ್ಡೇಬಾಗಿಲು,ಟಿ.ನರಸೀಪುರ ತಾಲ್ಲೂಕಿನ 25 ಗ್ರಾಮಗಳ 27.691 ಜನರಿಗೆ ನೀರಿನ ಸಂಪರ್ಕ.ಇದಕ್ಕೆ ಅನುದಾನ 34 ಕೋಟಿ

* ಹಾವೇರಿ ಜಿಲ್ಲೆಯ ನೆಗಳೂರಿನ ನಾಲ್ಕು ಗ್ರಾಮಗಳ 14,676 ಜನರಿಗೆ ಕುಡಿಯುವ ನೀರಿನ ಸಂಪರ್ಕ. ಒಟ್ಟು ಅನುದಾನ 18 ಕೋಟಿ

* ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ ತಾಲ್ಲೂಕಿನ ಹಂಪಾಪುರದ 36 ಗ್ರಾಮಗಳ 41,561 ಜನರಿಗೆ ನೀರಿನ ಸಂಪರ್ಕ.ಒಟ್ಟು ಅನುದಾನ 65.07 ಲಕ್ಷ

* ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಕುಡ್ಲದ ಆರು ಗ್ರಾಮಗಳ 14,917 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ 26ಲಕ್ಷ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments