Freedom TV

ಗೌರಿ ಹಬ್ಬದ ದಿನದಂದೇ ಕರ್ನಾಟಕದಲ್ಲಿ ರಸ್ತೆ ಅಪಘಾತದಲ್ಲಿ 12 ಸಾವು

ಗೌರಿ ಹಬ್ಬದ ಸಂಭ್ರಮ, ಸಡಗರ ಕರ್ನಾಟಕದಲ್ಲಿ ಮನೆ ಮಾಡಿದೆ. ಆದರೆ, ಸಂಭ್ರಮ ದಿನದಂದೇ ರಾಜ್ಯದ ಹಲವು ಕಡೆ ರಸ್ತೆ ಅಪಘಾತಗಳು ಸಂಭವಿಸಿದ್ದು ಒಟ್ಟು 12 ಜನರು ಮೃತಪಟ್ಟಿದ್ದಾರೆ. ವಿಜಯಪುರ, ಬಾಗಲಕೋಟೆ, ರಾಮನಗರ, ಮಂಗಳೂರಿನಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಮೃತರ ಕುಟುಂಬಸ್ಥರ ಪಾಲಿಗೆ ಕಾರಳ ದಿನವಾಗಿದೆ.

Alarming Rise in Road Accidents and Fatalities: India's Road Safety Crisis

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ವಿಜಯಪುರ (Vijayapura), ಬಾಗಲಕೋಟೆ (Bagalkot), ರಾಮನಗರ (Ramnagar) ಮತ್ತು ಮಂಗಳೂರಿನಲ್ಲಿ ಅಪಘಾತಗಳು ಸಂಭವಿಸಿವೆ. ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಾಲ್ವರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಗುರುವಾರ (ಸೆ.06) ತಡರಾತ್ರಿ ನಡೆದಿದೆ. ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಮತ್ತು ರಸ್ತೆ ಬದಿ ನಿಂತಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.

ರಾಮನಗರ ಜಿಲ್ಲೆಯ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮೂರ್ತಿ (39), ಶೇಖ್ ಆಸೀಫ್ (45), ವೆಂಕಟೇಶ್ (50)‌ ಮೃತ ದುರ್ದೈವಿಗಳು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಸಾವೀಗಿಡಾಗಿದ್ದಾನೆ.

ಬಾಗಲಕೋಟೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಬಿವಿವಿಯ ಶ್ರುತಿ ಒಂದಕುದರಿ (32), ಡೆಂಟಲ್ ಕಾಲೇಜ್ ಉಪನ್ಯಾಸಕಿ, ರಜನಿ ಒಂದಕುದರಿ (34), ಸಾಪ್ಟವೇರ್ ಇಂಜಿನಿಯರ್ ಅಭಿಷೇಕ್ ದೋತ್ರಿ (20) ಮೃತರು.

Comments (0)

Your email address will not be published. Required fields are marked *

Back to top button