ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್18 ಕ್ಕೆ ಒಂದು ವರ್ಷ ಆಗುತ್ತೆ, ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಿದೆ. ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ ಇಂತಹವರು ಯಾರಾದ್ರು ಬಂದ್ರೆ ಚುಚ್ಚಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಇರೋದು ಮುಸ್ಲಿಂರ ರಕ್ಷಣೆಗಾಗಿ, ಅವರ ಓಟ್ ಗಾಗಿ ಜೋಲ್ಲು ಸುರಿಸುತ್ತಾರೆ ಎಂದು ಕಿಡಿಕಾರಿದರು.
ಮುಸ್ಲಿಂ ಯುವಕನಿಂದ ಹಲ್ಲೆಗೊಳಗಾದ ಯುವತಿಗೆ ಯಾವುದೇ ತೊಂದರೆ ಇಲ್ಲ. ಯುವಕ ಟಾರ್ಚರ್ ನಿಂದ ನೊಂದು 13 ಮಾತ್ರೆಗಳನ್ನು ಸೇವಿಸಿದ್ದಾಳೆ. ಸಿರಾಜ್ ಮತ್ತು ಯುವತಿ ನಡುವೆ 9 ಕ್ಲಾಸ್ ನಿಂದ ಪ್ರೀತಿ ಇತ್ತು.
ಆದರೆ ಗ್ರಾಮಸ್ಥರು ಅಂದೇ ಅದನ್ನು ಬಗೆಹರಿಸಿದ್ದರು. ಇದಾದ ಮೇಲೆ ಸಿರಾಜ್ ಪಿಡಿಸುತ್ತಿದ್ದ ನಿಮ್ಮ ತಂದೆ -ತಾಯಿ ಕೊಲೆ ಮಾಡುವೆ ಅಂತ ಬೆದರಿಕೆ ಹಾಕಿದ್ದ. ರಂಜಾನ್ ನಿಂದ ಹಾಸ್ಟೆಲ್ಗೆ ತೆರಳಿ ಹಲ್ಲೆ ಮಾಡಿದ್ದಾನೆ..
ನೇಹಾ ಹಿರೇಮಠ ಹತ್ಯೆ ಆಗಿ ಇನ್ನೂ ಒಂದು ವರ್ಷ ಆಗಿಲ್ಲ ಈಗ ಮತ್ತೆ ಅಂತಹ ಘಟನೆ ಮರುಕಳಿಸುತ್ತಿವೆ
ಇದಕ್ಕೆ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯ ಕಾರಣ. ಇಂತಹವರನ್ನು ಎನ್ ಕೌಂಟರ್ ಮಾಡಿ ಬಿಸಾಕಿದ್ರೆ ಈ ರೀತಿಯ ಕೃತ್ಯ ನಡೆಯೋದಿಲ್ಲ.ಇಂತಹ ಕೃತ್ಯ ಮಾಡೋರಿಗೆ ಭಯವೆ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿ ಕಾಂಗ್ರೆಸ್ ನಿರ್ಮಾಣ ಮಾಡಿದೆ ಸರ್ಕಾರದ ಶಿಕ್ಷೆ ನೀಡದಿದ್ದರೇ ನಾವೇ ಅವನಿಗೆ ಶಿಕ್ಷೆ ನೀಡುತ್ತೇವೆ ಎಂದರು.
ಇಡೀ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಇರುವುದು ಬಿಜೆಪಿ ಪಕ್ಷ ಒಂದೇ. ಆದರೆ ಕರ್ನಾಟಕದಲ್ಲಿ ಹಿಂದುತ್ವ, ಹಿಂದೂ ಸಂಘಟನೆಗಳನ್ನು ಸರಿಯಾಗಿ ಗಮನಿಸಿಲ್ಲ. ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಾಪಸಾತಿ ಮಾಡಿಲ್ಲ. ಬಿಜೆಪಿ ಆಡಳಿತದಲ್ಲೆ ಹಿಂದು ಸಂಘಟನೆ ಮುಖ್ಯಸ್ಥರ ಕೊಲೆಯಾಯಿತು.
ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕ್ಕೆ ಬಿದ್ದಿದೆ. ಯತ್ನಾಳ ಅವರು ಹಿಂದೂ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಯನ್ನೆ ಪ್ರಬಲ ಹಿಂದುಪಕ್ಷ ಮಾಡೋದು ಒಳ್ಳೆಯದು. ಯತ್ನಾಳರನ್ನು ವಾಪಸಾತಿ ಮಾಡಲೇ ಬೇಕು. ರಾಜ್ಯದಲ್ಲಿ ಮುಂದೆ ಬಿಜೆಪಿ ಒಳ್ಳೆಯ ಭವಿಷ್ಯವಿದೆ ಎಂದರು.


