ಕ್ರೈಂ ಸ್ಟೋರಿಜಿಲ್ಲೆ

ಹೊಳಲ್ಕೆರೆ ಬಳಿ ದಾಖಲೆಯಿಲ್ಲದೆ 8 ಕೋಟಿ ಹಣ ಜಪ್ತಿ ?

ಚಿತ್ರದುರ್ಗ : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ಹೊಳಲ್ಕೆರೆ ಪೊಲೀಸರು ಜಪ್ತಿ ಮಾಡಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ಬಳಿ ನಡೆದಿದೆ. ಈ ಪ್ರಕರಣ ಸಂಬಂಧ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ಪ್ರತಿಕ್ರಿಯೆ ನೀಡಿದ್ದು, ಹಣ ಸಾಗಿಸುತ್ತಿದ್ದವರಿಗೆ ದಾಖಲೆ ನೀಡುವಂತೆ ನೋಟಿಸ್​ ನೀಡಲಾಗಿದೆ. ಹಣ ಸಾಗಿಸುತ್ತಿದ್ದ ಉದಯ್​​ ಶೆಟ್ಟಿ ದಾಖಲೆ ನೀಡಿಲ್ಲ ತನಿಖೆ ನಡೆಯುತ್ತಿದೆ. ಉದಯ್​ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ಕೋರ್ಟ್​ಗೆ ದಾಖಲೆ ಒದಗಿಸಿ ಹಣ ವಾಪಸ್​​ ಪಡೆಯಬಹುದು ಎಂದರು.

ಹೊಳಲ್ಕೆರೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಇನ್ನೋವಾ ಕಾರನ್ನು ತಡೆದು ಪರಿಶೀಲಿಸಿದಾಗ ದಾಖಲೆ ಇಲ್ಲದೆ ಎಂಟು ಕೋಟಿ ರೂಪಾಯಿಗಳನ್ನು ಸಾಗಿಸಲಾಗುತ್ತಿತ್ತು. ಇಷ್ಟೊಂದು ಹಣವನ್ನು ಅಡಿಕೆ ವ್ಯಾಪಾರಿ ಉದಯ್ ಶೆಟ್ಟಿ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. 10 ಲಕ್ಷದ ಮೇಲಿರುವ ಹಣವಾಗಿದ್ದರಿಂದ ಆದಾಯ ತೆರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.

Comments (0)

Your email address will not be published. Required fields are marked *

Back to top button