ಗದಗ : ಶ್ರೀ ರಾಮಮಂದಿರ ಉಳಿಯಬೇಕು ಅಂದರೆ ಹಿಂದೂ ರಾಷ್ಟ್ರ ಆಗ್ಬೇಕು ಎನ್ನುವ ಉಡುಪಿ ಮಠದ ಪೇಜಾವರ ಶ್ರೀಗಳ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಹಿಂದೂ ರಾಷ್ಟ್ರ ಆಗ್ಬೇಕು ಎನ್ನುವದು ಬಿಜೆಪಿ ಸ್ಲೋಗನ್. ಜನ ಸಂಘವಾಗಿದ್ದು, 1950 ನೇ ಇಸ್ವಿಯಲ್ಲಿ ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳಿದ್ರು.

ನಮ್ಮ ದೇಶ ಹಿಂದೂಗಳ ರಾಷ್ಟ್ರ ಅಲ್ಲಾ, ನಮ್ಮ ಸಮಾಜದಲ್ಲಿ ಹಿಂದೂಗಳಷ್ಟೇ ಇಲ್ಲಾ. ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ್, ಇದ್ದಾರೆ, ನಮ್ಮ ದೇಶ ಬಹುತ್ವದ ದೇಶವಾಗಿದೆ. ಕೇವಲ ಹಿಂದೂಗಳ ರಾಷ್ಟ್ರವನ್ನು ಮಾಡಲು ಆಗೋದಿಲ್ಲ. ಇದೊಂದು ಬಿಜೆಪಿಯವರ ಸ್ಲೋಗನ್, ಈ ದೇಶವನ್ನು ಹಿಂದೂ ರಾಷ್ಟ್ರ ಮಾಡೋದು ಬಿಜೆಪಿಯವರ ಸಿದ್ದಾಂತ. ಈ ದೇಶವನ್ನು ಹಿಂದೂರಾಷ್ಟ ಮಾಡಲು ಆಗೋದಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೇಳಿದರು.
ಆರ್ ಎಸ್ ಎಸ್ ಹುಟ್ಟಿದ್ದು, 1925 ರಲ್ಲಿ, ಕೆ ಬಿ ಹೆಡ್ಗೆವಾರ ಸ್ಥಾಪನೆ ಮಾಡಿದ್ದು, ಬಿಜೆಪಿಯವರನ್ನ ಕೇಳಿ ಅವರಿಗೆ ಇವೆಲ್ಲಾ ಗೊತ್ತೇ ಇಲ್ಲಾ. ಸುಮ್ಮನೆ ಹೊಡೆಯುತ್ತಾರೆ ಬುರುಡೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.


