Monday, June 23, 2025
26.6 C
Bengaluru
Google search engine
LIVE
ಮನೆUncategorizedಹಮಾಸ್​​ನಿಂದ 14 ಮಂದಿ ಒತ್ತೆಯಾಳುಗಳ ಬಿಡುಗಡೆ

ಹಮಾಸ್​​ನಿಂದ 14 ಮಂದಿ ಒತ್ತೆಯಾಳುಗಳ ಬಿಡುಗಡೆ

ಇಸ್ರೇಲ್​ : ಕದನ ವಿರಾಮ ಒಪ್ಪಂದದಂತೆ ಹಮಾಸ್​ ಬಂಡುಕೋರರು ಬುಧವಾರ 10 ಮಂದಿ ಇಸ್ರೇಲಿಗಳು ಹಾಗೂ 4 ಮಂದಿ ಥಾಯ್​​ ಪ್ರಜೆಗಳು ಸೇರಿದಂತೆ ಒಟ್ಟು 14 ಜನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಟೈಮ್ಸ್​​ ಆಫ್​ ಇಸ್ರೇಲ್​ ವರದಿ ಮಾಡಿದೆ.

ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್​ ಕ್ರಾಸ್​​ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್​ ರಕ್ಷಣಾ ಪಡೆ ದೃಢಪಡಿಸಿದೆ. ಕದನ ವಿರಾಮ ಘೋಷಣೆಯ 6ನೇ ದಿನವಾದ ಬುಧವಾರ ಈ ಪ್ರಕ್ರಿಯೆ ನಡೆದಿದೆ. ಇಸ್ರೇಲ್​ ಸರ್ಕಾರ ನವೆಂಬರ್​​ 22ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 50 ಒತ್ತೆಯಾಳುಗಳ ಬಿಡುಗಡೆ ಷರತ್ತಿನೊಂದಿಗೆ ಕದನ ವಿರಾನಕ್ಕೆ ಸಮ್ಮತಿಸಿತ್ತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್​ ಅಧ್ಯಕ್ಷ ಬೆಂಜಮಿನ್​​ ನೆತನ್ಯಾಹು ಇದು ಯುದ್ಧದ ಮುಕ್ತಾಯವಲ್ಲ ಎಂದು ಸ್ಪಷ್ಟಪಡಿಸಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments