ಕರ್ನಾಟಕದ ಇತಿಹಾಸದಲ್ಲಿ ಕಂಡೂ ಕೇಳರಿಯದ ಬರವಿದೆ. ಜಲಕ್ಷಾಮ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ , ಜನ ಜಾನುವಾರುಗಳು ದಾಹದಲ್ಲಿ ಬಳಲುತ್ತಿದೆ . ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಸರಕಾರ ಮಾತ್ರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನ ಆಡಂಬರದಿಂದ ನೆಡೆಸುತ್ತಿದೆ,ಎಂದು ಮಾಜಿ ಮುಖ್ಯ್ಮಂತ್ರಿ ಸರ್ಕಾರದ ವಿರುದ್ಧ ನಿಗಿ ನಿಗಿ ಕೆಂಡವಾಗಿದ್ದಾರೆ.
‘ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!’ ಎಂದು ಕುಮಾರಸ್ವಾಮಿ ಸಿದ್ದು ವಿರುದ್ಧ ಕುಹಕವಾಗದಿದ್ದಾರೆ . ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!! ನಿಮ್ಗೆ ಜನ ಬೇಕಿಲ್ಲ ಗ್ಯಾರಂಟಿ ಯೋಜನೆ ಈಡೇರಿಸುವುದಕ್ಕೆ ಹಣ ಮಾತ್ರ ಬೇಕಿರುವುದು , ಚುನಾವಣೆ ಚಿಂತೆಯಷ್ಟೇ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.ನಿಮ್ಮಲ್ಲಿರೋ ವಕ್ರ ಚಿಂತನೆಗಳು ನಿಮ್ಮ ಪಕ್ಷಕ್ಕೆ ಚಿತೆಯಾಗಲಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಆದಷ್ಟು ಬೇಗ ಮುರಿದು ಹೊಸ ಸರ್ಕಾರ ರಚನೆಯಾಗಲಿದೆ ಎಂದಿರುವ ಹೆಚ್.ಡಿ.ಕೆ
ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರಕಾರಕ್ಕೆ ₹2000 ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ,ತಹಸೀಲ್ದಾರುಗಳ ಪಿಡಿ ಖಾತೆಗೆ ನಿಮ್ಮ ಸರಕಾರ ಕನ್ನ ಹಾಕಿದೆ. ಜನರ ಹಾಹಾಕಾರವೇ ನಿಮಗೆ ಭರ್ಜರಿ ಆಹಾರ!! ಹೌದಲ್ಲವೇ ಎಂದು ಪ್ರಶ್ನೆ ಮಾಡಿದರು.