Top Newsಸುದ್ದಿ

ಸ್ಲಂನಲ್ಲಿ ಬೆಳೆದು ಸುಪ್ರೀಂ ಸಿಜೆಐ ಆಗ್ತಿರುವ ಬಿಆರ್ ಗವಾಯಿ

ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಹೆಸರು ಫೈನಲ್ ಆಗಿದೆ. ಮೇ 13ರಂದು ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ಸಂದರ್ಭದಲ್ಲಿಯೇ ಅಂಬೇಡ್ಕರ್‌ ಜಯಂತಿಯಂದು ಅವರು ಆಡಿರುವ ಮಾತುಗಳು ವೈರಲ್‌ ಆಗಿವೆ.ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಯತ್ನದಿಂದಲೇ ನನಗೆ ಈ ಸ್ಥಾನ ಸಿಗಲು ಸಾಧ್ಯವಾಯಿತು, ನಾನು ಪುರಸಭೆಯ ಶಾಲೆಯಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡಿದವನು ಎಂದು ಬಿಆರ್ ಗವಾಯ್ ಹೇಳಿದ್ರು.

ಡಾ. ಅಂಬೇಡ್ಕರ್ ಅವರ ದೃಷ್ಟಿಕೋನದ ಮೇಲೆ ನಿರ್ಮಿಸಲಾದ ಭಾರತೀಯ ಸಂವಿಧಾನವು ಅನೇಕ ಜನರ ಜೀವನವನ್ನು ಹೇಗೆ ಬದಲಾಯಿಸಿದೆ ಮತ್ತು ಸಮಾಜಕ್ಕೆ ನ್ಯಾಯವನ್ನು ತಂದಿದೆ ಎಂಬುದನ್ ಬಿಆರ್ ಗವಾಯ್ ವಿವರಿಸಿದ್ರು.

18 ವರ್ಷಗಳ ಬಳಿಕ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ದಲಿತ ವ್ಯಕ್ತಿ ನೇಮಕಗೊಳ್ಳಲಿದ್ದಾರೆ. 2007ರಲ್ಲಿ ದೇಶದ ಉನ್ನತ ನ್ಯಾಯಾಂಗ ಹುದ್ದೆಗೆ ಬಡ್ತಿ ಪಡೆದ ನ್ಯಾಯಮೂರ್ತಿ ಕೆಜಿ.ಬಾಲಕೃಷ್ಣನ್‌ ಬಳಿಕ, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ 2ನೇ ದಲಿತ ವ್ಯಕ್ತಿ ಇವರು ಎನಿಸಲಿದ್ದಾರೆ.

Comments (0)

Your email address will not be published. Required fields are marked *

Back to top button