ಹುಬ್ಬಳ್ಳಿ : ಕಳೆದ ಅಧಿವೇಶನದ ಸಮಯದಲ್ಲಿ ವಿಪಕ್ಷದ 18 ಜನ ಶಾಸಕರನ್ನು 6 ತಿಂಗಳುಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಈಗ ಸ್ಪೀಕರ್ ಅವರು ಆದೇಶವನ್ನು ಹಿಂಪಡೆದಿದ್ದಾರೆ, ಸ್ಪೀಕರ್ ಅವರ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ವಿಧಾನ ಸಭೆ ವಿರೋಧ ಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಸ್ಫೀಕರ್ ಯು.ಟಿ.ಖಾದರ್ ಅವರು ವಿಪಕ್ಷದ 18 ಶಾಸಕರನ್ನು ಅಮಾನತು ಮಾಡಬಾರದಿತ್ತು, ಒಂದು ವೇಳೆ ಮಾಡುವುದಾದ್ರೆ ಒಂದು ಅಧಿವೇಶನದಿಂದ ಮಾತ್ರ ಹೊರಗೆ ಇಡಬಹುದಿತ್ತು. ಈ ಹಿಂದೆ ಇಂತಹ ಘಟನೆಗಳು ನಡೆದಾಗ ನ್ಯಾಯಾಲಯ ಸ್ಪೀಕರ್ ಅವರ ನಿರ್ಧಾರವನ್ನು ಕಟುವಾಗಿ ವಿರೋಧಿಸಿದೆ. ಜತೆಗೆ ಸ್ಪೀಕರವರಿಗೆ ಅಮಾನತು ನಿರ್ಧಾರ ಸರಿಯಲ್ಲ ಎಂದು ಮನವಿ ಮಾಡಿದ್ವಿ, ಪ್ರಜಾಪ್ರಭುತ್ವ ಅಂದ ಮೇಲೆ ಪ್ರತಿಭಟಿಸುವ ಹಕ್ಕು ಇರುತ್ತದೆ. ಆದರೆ ಕೊನೆಗೂ ನಮ್ಮ ಮನವಿಗೆ ಸ್ಪಂದಿಸಿ ಅಮಾನತು ನಿರ್ಧಾರ ಹಿಂದಕ್ಕೆ ಪಡೆದಿರುವುದು ಸ್ವಾಗತ ಎಂದು ತಿಳಿಸಿದರು.
ಮಳೆಗಾಲದ ಸಮಯದಲ್ಲಿ ನೆಗಡಿ ಕೆಮ್ಮು ಸಾಮಾನ್ಯ ಯಾರು ಭಯ ಪಡುವ ಅಗತ್ಯವಿಲ್ಲ, ನೆಗಡಿ ಕೆಮ್ಮು ಇದ್ದಲ್ಲಿ ವೈದ್ಯರ ಸಲಹೆ ಪಡೆದು ಮಾತ್ರೆ ತೆಗೆದುಕೊಳ್ಳಿ. ಒಂದು ವೇಳೆ ವಿಪರೀತ ನೆಗಡಿ ಕೆಮ್ಮ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ಮಾಡಿಸಿ ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.


