ಬಾಗಲಕೋಟೆ :ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮುಳುಗಡೆ ನಗರಿ ಬಾಗಲಕೋಟೆ ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ ,
ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಒಟ್ಟು 64 ಸಿಸಿ ಟಿವಿ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಿದ್ದಾರೆ.
ನಗರದ ವಲ್ಲಾಭಾಯಿ ಚೌಕನ ಬಜಾರ್ ಪೊಲೀಸ್ ಠಾಣೆಯಲ್ಲಿ,
ಜಿಲ್ಲಾಧಿಕಾರಿ ಕೆಎಂ ಜಾನಕಿ,ನೂತನ ಸಿಸಿ ಟಿವಿ ಕ್ಯಾಮೆರಾಗಳಿಗೆ ಚಾಲನೆ ನೀಡಿದರು. ಅಪರಾಧ ಕೃತ್ಯ ಹಾಗೂ ಕಾನೂನು ಉಲ್ಲಂಘನೆ ತಡೆಗಟ್ಟುವುದಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಪ್ಲಾನ್ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾದ ಲೈವ್ ದೃಶ್ಯಾವಳಿಗಳನ್ನ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಈಗ
ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಈ ವೇಳೆ
ಬಾಗಲಕೋಟೆಯ ಶಾಸಕ ಎಚ್ ವೈ ಮೇಟಿ, ಎಸ್ ಪಿ ಅಮರನಾಥ್ ರೆಡ್ಡಿ,ಜಿ,ಪಂ,ಸಿಇಓ ಶಶಿಧರ್ ಕುರೇರ ಉಪಸ್ಥಿತರಿದ್ದರು.


