ಬೆಂಗಳೂರು :
ಪ್ರಸಿದ್ಧ ಕಿರುತೆರೆ ನಟಿ ನಡುರಸ್ತೆಯಲ್ಲೇ ರಂಪಾಟ ಮಾಡಿರುವ ಘಟನೆ ಸಿಲಕಾನ್ ಸಿಟಿಯಲ್ಲಿ ವರದಿಯಾಗಿದೆ.
ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ, ಪುಂಡಾಟ ಮಾಡಿರುವ ಘಟನೆ ಬೆಂಗಳೂರಿನ ಜ್ನಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಜರುಗಿದೆ. ಕನ್ನಡದ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯರಿಂದ ಇಂತಹ ಕೃತ್ಯ ನಡೆದಿರುವುದು ಬಯಲಾಗಿದೆ. ಕಳೆದ ಡಿಸೆಂಬರ್ 6 ನೇ ತಾರೀಖು ಈ ಘಟನೆ ಜರುಗಿದೆ. ಹಲ್ಲೆಗೀಡಾಗಿರುವ ಯುವತಿ ಮಾಧುರಿ ತನ್ನ ಸೋದರಿ ಐಶ್ವರ್ಯ ಎನ್ನುವವರ ಜೊತೆ ಮೊಪೆಡ್ನಲ್ಲಿ ಹೋಗ್ತಿದ್ದಾಗ ನಟಿ ಲಕ್ಷ್ಮಿಯ ಐ10 ಕಾರು ಇವರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದಿದ್ದಲ್ಲೇ ಲಕ್ಷ್ಮಿ ಸಿದ್ದಯ್ಯ ಕಿರಿಕ್ ಮಾಡಿದ್ದಾರೆ.ಕಿರಿಕ್ ಮಾಡಿದ್ದಲ್ಲೆ ಮಾಧುರಿ ಹಾಗೂ ಐಶ್ವರ್ಯ ಮೇಲೆ ಹಲ್ಲೆ ಮಾಡಿದ ಆರೋಪವೂ ಇದೆ. ಲಕ್ಷ್ಮಿ ಹಾಗೂ ಸಹಚರ ಆನಂದ್ ಕುಮಾರ್ ಎಂಬಾತನಿಂದ ಹಲ್ಲೆ ಮಾಡಿದ ಆರೋಪವಿದೆ. ಹಲ್ಲೆ ನಡೆಸಿ ಮಾಧುರಿ ಮೊಬೈಲ್ ಕಸಿದಿರುವ ಬಗ್ಗೆ ಜ್ನಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ,
ಗಲಾಟೆ ನಡೆದು 3 ತಿಂಗಳಾದ್ರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಮತ್ತು ಕಸಿದುಕೊಂಡ ಮೊಬೈಲ್ ಸಹ ವಾಪಸ್ ಕೊಡಿಸಿಲ್ಲ ಎನ್ನಲಾಗಿದೆ.ಠಾಣೆಗೆ ಎಷ್ಟೇ ಅಲೆದರು ಕ್ಯಾರೆ ಅನ್ನದೇ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಹ ದೂರು ಕೇಳಿ ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಕಿರುತೆರೆ ನಟಿಯ ಪುಂಡಾಟ..
RELATED ARTICLES


